ಭ್ರೂಣಹತ್ಯೆ ಮಾಡಿ ತೋಟದಲ್ಲಿ ಹೂತುಹಾಕಿದ್ದ ನಕಲಿ ವೈದ್ಯ; ಆರೋಪಿ ಅರೆಸ್ಟ್

ಬೆಳಗಾವಿ: ಮಕ್ಕಳ ಮಾರಾಟ ಪ್ರಕರಣದ ನಕಲಿ ವೈದ್ಯ ಅಬ್ದುಲ್ ಗಫಾರ್ ಭ್ರೂಣಹತ್ಯೆ ಮಾಡಿ ತೋಟದಲ್ಲಿ ಹೂತಿಟ್ಟಿದ್ದ ಎಂಬುದು ತನಿಖೆಯ ವೇಳೆ ಬಯಲಾಗಿದೆ.

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ತಿಗಡೊಳ್ಳಿ ಬಳಿಯ ನಕಲಿ ವೈದ್ಯ ಅಬ್ದುಲ್ ಗಫಾರ್ ಫಾರ್ಮ್ ಹೌಸ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ತೋಟದಲ್ಲಿ ಮೂರು ಭ್ರೂಣಗಳ ಕಳೇಬರ ಪತ್ತೆಯಾಗಿದೆ.

ಆರೋಪಿ ಅಬ್ದುಲ್ ಗಫಾರ್ ಹಾಗೂ ಆತನ ಸಹಾಯಕ ರೋಹಿತ್ ಕುಪ್ಪಸಗೌಡರ್ ನನ್ನು ಪೊಲೀಸರು ಬಂಧಿಸಿದ್ದಾರೆ. ರೋಹಿತ್, ಅಬ್ದುಲ್ ಗಫಾರ್ ಬಳಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಭ್ರೂಣಗಳ ಕಳೇಬರ ವಶಕ್ಕೆ ಪಡೆದಿರುವ ಪೊಲೀಸರಿ ಎಫ್ ಎಸ್ ಎಲ್ ಗೆ ರವಾನಿಸಿದ್ದಾರೆ.

ಕೆಲ ದಿನಗಳ ಹಿಂದೆ ನಕಲಿ ವೈದ್ಯ ಅಬ್ದುಲ್ ಗಾಫರ್ ನನ್ನು ಮಕ್ಕಳ ಮಾರಾಟ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣದ ತನಿಖೆ ನಡೆಸುಇದ ಪೊಲೀಸರಿಗೆ ಈಗ ನಕಲಿ ವೈದ್ಯ ಭ್ರೂಣಹತ್ಯೆ ಕೇಸ್ ನಲ್ಲಿಯೂ ಭಾಗಿಯಾಗಿದ್ದಾನೆ ಎಂಬುದು ಬಯಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read