ಕರ್ನಾಟಕಕ್ಕೆ ಹರಿದು ಬರುವ ಬಂಡವಾಳವನ್ನು ತಮಿಳುನಾಡಿಗೆ ಹರಿಸಿದ ಕಾಂಗ್ರೆಸ್ ಸರ್ಕಾರ; ಬಿಜೆಪಿ ಕಿಡಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು ಕುಂಭಕರ್ಣ ನಿದ್ದೆಯಿಂದ ಎದ್ದಿಲ್ಲ, ವಿದೇಶಿ ಹೂಡಿಕೆದಾರರು ಕರ್ನಾಟಕದತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ ! ಇದು ಕನ್ನಡಿಗರ ದೌರ್ಭಾಗ್ಯ…..ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ.

ಅರಾಜಕತೆಯನ್ನು ಏರಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿರುವ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಫ್‌ಡಿಐ ಹೂಡಿಕೆಯಲ್ಲಿ ಗಣನೀಯ ಕುಸಿತವಾಗಿದೆ. ಅಭಿವೃದ್ಧಿಗೆ ತಿಲಾಂಜಲಿ ಹಾಡಿ, ಉದ್ಯೋಗ ಸೃಷ್ಟಿಗೆ “ಕೈ” ಕೊಟ್ಟಿರುವ ಕಾಂಗ್ರೆಸ್‌ನಿಂದ ಕರ್ನಾಟಕ ರಾಜ್ಯ ಅಭಿವೃದ್ಧಿಯಲ್ಲಿ ರಿವರ್ಸ್ ಗೇರ್‌ನಲ್ಲಿ ಸಾಗುತ್ತಿರುವುದು ನಿಜಕ್ಕೂ ಕಳವಳದ ವಿಚಾರ ಎಂದು ಸರಟಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.

ತಮಿಳುನಾಡಿಗೆ ಕಾವೇರಿ ನೀರು ಹರಿಸಿದ ಹಾಗೆ, ಕೇರಳಿಗರಿಗೆ ಬಿಎಂಟಿಸಿಯಲ್ಲಿ ನೌಕರಿ ನೀಡಿದ ಹಾಗೆ, ಕರ್ನಾಟಕಕ್ಕೆ ಹರಿದು ಬರುವ ಬಂಡವಾಳವನ್ನು ತಮಿಳುನಾಡಿಗೆ ಹರಿಸಿದೆ ನಾಡದ್ರೋಹಿ ಕಾಂಗ್ರೆಸ್ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read