ಅನಂತಪುರ: ಹೆತ್ತ ಮಗಳನ್ನು ಕೊಂದು ಸುಟ್ಟು ಹಾಕಿದ್ದ ತಂದೆಯೊಬ್ಬ ಕೊನೆಗೂ ಪೊಲೀಸರ ಮುಂದೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಅನಂತಪುರದ ಗುಂಟಕಲ್ ನಲ್ಲಿ ನಡೆದಿದೆ.
ಇಡೀ ಕುಟುಂಬದಲ್ಲಿ ಪ್ರಿತಿಯಿಂದ ಸಾಕಿದ್ದ ಕಿರಿಯ ಮಗಳೇ ವಿದ್ಯಾವಂತೆಯಾಗಿದ್ದಳು. ಆಕೆಯ ಮೇಲೆ ತಂದೆ-ತಾಯಿ ನೂರಾರು ಕನಸು ಹೊಂದಿದ್ದರು. ಆದರೆ ಮಗಳು ಯುವಕನೊಬ್ಬನ ಪ್ರೀತಿಯಲ್ಲಿ ಬಿದ್ದಿದ್ದಳು. ಆತನ ಪ್ರೀತಿಯಲ್ಲಿ ಬಿದ್ದು ಜೀವನ ಹಾಳು ಮಾಡಿಕೊಳ್ಳುತ್ತಿಯಾ ಎಂದು ಪೋಷಕರು ಎಷ್ಟೇ ಬುದ್ಧಿ ಹೇಳಿದರು ಮಗಳು ಒಪ್ಪುತ್ತಿರಲಿಲ್ಲ. ಆತನನ್ನೇ ಪ್ರೀತಿಸಿ ಮದುವುಯೆಯಾಗುವುದಾಗಿ ಹಠ ಹಿಡಿದಿದ್ದಳು.
ಆತಾಯಿ ಜೊತೆಯೂ ಮಾತನಾಡುವುದನ್ನು ನಿಲ್ಲಿಸಿದ್ದಳು. ಪ್ರೀಯಕರನನ್ನು ನೋಡಲು ಆಗಾಗ ಹೋಗುತ್ತಿದ್ದಳು. ಇದನ್ನು ತಡೆದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಳು.
ಮಗಳ ವರ್ತನೆಯಿಂದ ತೀವ್ರವಾಗಿ ನೊಂದ ತಂದೆ ಟಿ.ರಾಮಾಂಜನೇಯಲು ಮಾರ್ಚ್ 1ರಂದು ಮಧ್ಯಾಹ್ನ ಕಸಾಅಪುರಂ ಗ್ರಾಮದ ನಿರ್ಜನ ಪ್ರದೇಶಕ್ಕೆ ಮಗಳನ್ನು ಕರೆದೊಯ್ದು ಆಕೆಗೆ ನೇಣು ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ದೇಹಕ್ಕೆ ಪೆಟ್ರೋಲ್ ಸುರಿದು ಸುಟ್ಟುಹಾಕಿದ್ದಾನೆ.
ಬಳಿಕ ಇಂದು ಆರೋಪಿ ಪೊಲೀಸರ ಮುಂದೆ ಬಂದು ಶರಣಾಗಿದ್ದಾನೆ. ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 103 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.