ಆಸ್ತಿಯಲ್ಲಿ ಮಗಳಿಗೆ ಹೆಚ್ಚು ಪಾಲು ನೀಡಿದ ತಂದೆಯನ್ನು ಅಟ್ಟಾಡಿಸಿ ಕೊಂದ ಪುತ್ರ

ಮಂಡ್ಯ: ಆಸ್ತಿಯಲ್ಲಿ ಮಗಳಿಗೆ ಹೆಚ್ಚು ಪಾಲು ನೀಡಿದ ತಂದೆಯನ್ನು ಪುತ್ರನೇ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ ಘಟನೆ ಮಂಡ್ಯ ತಾಲೂಕಿನ ಸುಂಡಹಳ್ಳಿಯಲ್ಲಿ ನಡೆದಿದೆ.

65 ವರ್ಷದ ನಂಜಪ್ಪ ಕೊಲೆಯಾದ ವ್ಯಕ್ತಿ. ಆರೋಪಿ ಪುತ್ರ ಮಹದೇವ(40) ಘಟನೆಯ ನಂತರ ಪರಾರಿಯಾಗಿದ್ದಾನೆ. ಮೂಲತಃ ರಾಮನಗರ ಜಿಲ್ಲೆ ಅರ್ಚಕರಹಳ್ಳಿ ಗ್ರಾಮದವರಾದ ನಂಜಪ್ಪ ನಂತರ ಮಗಳು ಮತ್ತು ಅಳಿಯ ಇದ್ದ ಸುಂಡಹಳ್ಳಿ ಗ್ರಾಮದಲ್ಲಿ ನೆಲೆಸಿದ್ದರು. ಸ್ವಂತ ಮನೆ ಜಮೀನು ಮಾಡಿಕೊಂಡಿದ್ದು, ಅರ್ಚಕರ ಹಳ್ಳಿಯಲ್ಲಿದ್ದ ಎರಡು ಎಕರೆ ಜಮೀನು ಮಾರಾಟ ಮಾಡಿ ಬಂದ ಹಣವನ್ನು ಪುತ್ರಿ ಮತ್ತು ಪುತ್ರನಿಗೆ ಹಂಚಿದ್ದರು. ಪುತ್ತಿಗೆ ಸ್ವಲ್ಪ ಜಾಸ್ತಿ ಹಣ ಕೊಟ್ಟಿದ್ದರು. ಇದರಿಂದ ಪತ್ರ ಮಹದೇವ ಆಕ್ರೋಶಗೊಂಡು ಆಗಾಗ ತಂದೆಯೊಂದಿಗೆ ಜಗಳವಾಡುತ್ತಿದ್ದ.

ಇತ್ತೀಚೆಗೆ ಅರ್ಧ ಎಕರೆ ಜಮೀನು ಮಾರಾಟ ಮಾಡಿದ ನಂಜಪ್ಪ ಹಣವನ್ನು ಪುತ್ರಿಗೆ ನೀಡಿದ್ದು, ಆಕ್ರೋಶಗೊಂಡ ಮಹದೇವ ತಂದೆಯೊಂದಿಗೆ ಜಗಳ ತೆಗೆದು ಹಲ್ಲೆ ಮಾಡಿದ್ದಾನೆ. ತಪ್ಪಿಸಿಕೊಳ್ಳಲು ಮನೆಯಿಂದ ಹೊರಗೆ ಓಡಿ ಬಂದ ನಂಜಪ್ಪನನ್ನು ಗ್ರಾಮದಲ್ಲಿ ಅಟ್ಟಾಡಿಸಿ ಹಲ್ಲೆ ಮಾಡಿದ್ದು, ತಡೆಯಲು ಬಂದ ತಾಯಿ ಮೇಲೆಯೂ ಮಾರಣಾಂತಿಕ ಹಲ್ಲೆ ನಡೆಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ತಂದೆ ಮುಖವನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read