ಮುಂಬೈ: ತಂದೆಯೊಬ್ಬ ಐದು ವರ್ಷದ ಮಗಳ ಮೇಲೆ ಹಲ್ಲೆ ನಡೆಸಿ, ಸಿಗರೇಟ್ ನಿಂದ ಸುಟ್ಟು ವಿಕೃತಿ ಮೆರೆದಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಪತ್ನಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಆರೋಪಿ ತಂದೆ ರಾಜೇಶ್ ಎಂಬಾತ ಮಗಳ ಮೇಲೆ ಮನ ಬಂದಂತೆ ಹಲ್ಲೆ ನಡೆಸಿ, ಸಿಗರೇಟ್ ನಿಂದ ಸುಟ್ಟು ಗಾಯಗೊಳಿಸಿ ಚಿತ್ರ ಹಿಂಸೆ ನೀಡಿದ್ದಾನೆ. ಸಂಜನಾ ತಂದೆಯಿಂದ ಹಲ್ಲೆಗೊಳಗಾದ ಐದು ವರ್ಷದ ಪುತ್ರಿ.
ತಂದೆಯೇ ಮಗಳನ್ನು ಮನಬಂದಂತೆ ಥಲಿಸಿ, ಆಕೆಯ ಕೆನ್ನೆಯ ಮೇಲೆ ಸಿಗರೇತ್ ನಿಂದ ಸುಟ್ಟು ಅಟ್ಟಹಾಸ ಮೆರೆದಿದ್ದಾನೆ. ಸದ್ಯ ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಕೇಸ್ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.