ಡಿಸಿಎಂ ಡಿ.ಕೆ. ಶಿವಕುಮಾರ್ ಸವಾರಿ ಮಾಡಿದ್ದ ಸ್ಕೂಟರ್ ಮೇಲಿವೆ ಬರೋಬ್ಬರಿ 34 ಕೇಸ್, 18 ಸಾವಿರ ರೂ. ದಂಡ ಬಾಕಿ

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸವಾರಿ ಮಾಡಿದ್ದ ಸ್ಕೂಟರ್ ಮೇಲೆ 34 ಕೇಸ್ ಗಳಿರುವುದು ತಿಳಿದು ಬಂದಿದೆ.

ಬೆಂಗಳೂರು ನಗರದ ಹೆಬ್ಬಾಳ ಮೇಲ್ಸೇತುವೆ ಕಾಮಗಾರಿ ಪರಿಶೀಲನೆಯ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸವಾರಿ ಮಾಡಿದ್ದ ದ್ವಿಚಕ್ರ ವಾಹನದ ಮಾಲೀಕರ ಮೇಲೆ 18,500 ರೂ. ದಂಡ ಬಾಕಿ ಇರುವುದು ಬೆಳಕಿಗೆ ಬಂದಿದೆ. ದ್ವಿಚಕ್ರವಾಹನದ ಸವಾರ 2020 ರಿಂದ 34 ಸಲ ಸಂಚಾರ ನಿಯಮ ಉಲ್ಲಂಘಿಸಿರುವುದು ಸಂಚಾರ ಪೊಲೀಸರ ದತ್ತಾಂಶದಲ್ಲಿ ಗೊತ್ತಾಗಿದೆ.

ಬಿಡಿಎ ವತಿಯಿಂದ ಹೆಬ್ಬಾಳ ಜಂಕ್ಷನ್ ನಲ್ಲಿ ನಿರ್ಮಿಸಿರುವ ಹೊಸ ಮೇಲ್ಸೇತುವೆ ಕಾಮಗಾರಿ ವೀಕ್ಷಿಸಲು ಅಧಿಕಾರಿಗಳೊಂದಿಗೆ ಆಗಮಿಸಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಫ್ ಹೆಲ್ಮೆಟ್ ಧರಿಸಿ ಡಿಯೋ ಸ್ಕೂಟರ್ ನಲ್ಲಿ ರೌಂಡ್ ಹಾಕಿದ್ದರು. ಐಎಸ್ಐ ಗುರುತು ಇಲ್ಲದ ಗುಣಮಟ್ಟವಲ್ಲದ ಹೆಲ್ಮೆಟ್ ಧರಿಸಿ ಡಿಸಿಎಂ ನಿಯಮ ಉಲ್ಲಂಘಿಸಿದ್ದಾರೆ ಎಂದು ಹೇಳಲಾಗಿದೆ.

KA 04 JZ 2087 ನೋಂದಣಿ ಸಂಖ್ಯೆಯ ಗೇರ್‌ಲೆಸ್ ಸ್ಕೂಟರ್ ಅನ್ನು ಆರ್‌ಟಿ ನಗರದ ಭುವನೇಶ್ವರಿನಗರದ ಬಾಬ್ಜನ್ ಹೆಸರಿನಲ್ಲಿ ನೋಂದಾಯಿಸಲಾಗಿದೆ. 34 ಅಪರಾಧಗಳ ಪಟ್ಟಿಯಲ್ಲಿ ಸವಾರಿ ಮಾಡುವಾಗ ಮೊಬೈಲ್ ಫೋನ್‌ನಲ್ಲಿ ಮಾತನಾಡುವುದು, ಟ್ರಾಫಿಕ್ ಸಿಗ್ನಲ್‌ಗಳನ್ನು ಜಂಪ್ ಮಾಡುವುದು, ತಪ್ಪಾಗಿ ಪಾರ್ಕಿಂಗ್ ಮಾಡುವುದು ಮತ್ತು ಹೆಲ್ಮೆಟ್ ಇಲ್ಲದೆ ಸವಾರಿ ಮಾಡುವುದು ಸೇರಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read