ರೈತರು ಬೆಳೆಗಳ ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರಗಳನ್ನು ಬಳಸಿ-ಯೂರಿಯಾ ಗೊಬ್ಬರಕ್ಕೆ ಆತಂಕ ಬೇಡ : ಕೃಷಿ ಇಲಾಖೆ

ಬಳ್ಳಾರಿ : ಜಿಲ್ಲೆಯ ರೈತರು ತಾವು ಬೆಳೆಯುವ ಬೆಳಗಳ ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರಗಳನ್ನು ಬಳಸಬೇಕು. ಯೂರಿಯಾ ರಸಗೊಬ್ಬರಕ್ಕೆ ಆತಂಕಪಡುವ ಅಗತ್ಯವಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಜುಲೈ ಮಾಹೆಯವರೆಗೆ ಒಟ್ಟು 27025 ಮೆ.ಟನ್‌ಗಳ ಬೇಡಿಕೆ ಇದ್ದು, ಇಲ್ಲಿಯವರೆಗೆ ಪ್ರಾರಂಭಿಕ ಶಿಲ್ಕು ಸೇರಿ 34,163 ಮೆ.ಟನ್ ದಾಸ್ತಾನು ಮಾಡಲು, ಈ ಪೈಕಿ 25,887 ಮೆ.ಟನ್ ವಿತರಣೆಯಾಗಿ 8,286 ಮೆ.ಟನ್‌ಗಳಷ್ಟು ದಾಸ್ತಾನು ಉಳಿದಿದೆ.

ಜಿಲ್ಲೆಯಲ್ಲಿ ಪ್ರಸ್ತಕ ಸಾಲಿನ ಮುಂಗಾರು ಹಂಗಾಮಿಗೆ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಬಿತ್ತನೆ ಮಾಡಲು ಲಭ್ಯವಿದ್ದ ಒಟ್ಟು 2,81,522 ಹೆಕ್ಟೇರ್ ಸಾಗುವಳಿ ಪ್ರದೇಶಕ್ಕೆ ಅನುಗುಣವಾಗಿ ಯೂರಿಯಾ ರಸಗೊಬ್ಬರಗಳ ಬೇಡಿಕೆ ಅಂದಾಜಿಸಲಾಗಿ ಮಾಹೆವಾರು ಕಾರ್ಯಕ್ರಮವನ್ನು ಸರಬರಾಜುದಾರರುವಾರು ರೂಪಿಸಿಕೊಳ್ಳಲಾಗಿದೆ.

ಪ್ರಸಕ್ತ ಸಾಲಿನಲ್ಲಿ ಪೂರ್ವ ಮುಂಗಾರು ಮಳೆಯು ಉತ್ತಮವಾಗಿ ಬಂದ ಕಾರಣ ಹೆಚ್ಚಿನ ಪ್ರದೇಶದಲ್ಲಿ ಬೆಳೆಗಳನ್ನು ಬಿತ್ತನೆ ಮಾಡಲು ರೈತರು ಉತ್ಸುಕತೆ ತೋರಿದ ಪರಿಣಾಮವಾಗಿ ಎರಡು, ಮೂರು ವರ್ಷಗಳಿಂದ ಮೆಣಸಿನಕಾಯಿ ಬೆಳೆಯ ಬೆಲೆಯಲ್ಲಿ ಕುಸಿತವಾದ ಪರಿಣಾಮ ಜಿಲ್ಲೆಯಲ್ಲಿ ಮೆಕ್ಕೆಜೋಳ ಮತ್ತು ಹತ್ತಿ ಬೆಳೆಯ ಬಿತ್ತನೆ ಪ್ರದೇಶ ಕ್ರಮವಾಗಿ 24,000 ಹೆಕ್ಟೇರ್‌ನಿಂದ 30,000 ಹೆಕ್ಟೇರ್‌ಗೆ ಹಾಗೂ 20,000 ಹೆಕ್ಟೇರ್‌ನಿಂದ 25,000 ಹೆಕ್ಷೇರ್‌ಗೆ ಏರಿಕೆಯಾಗಿದೆ.

ಮುಖ್ಯವಾಗಿ ತುಂಗಭದ್ರ ನದಿಯ ನೀರನ್ನು ಕಾಲುವೆಗಳಿಗೆ ಮುಂಚಿತವಾಗಿ ಹರಿಸಿರುವುದರಿಂದ ಸಂಯುಕ್ತ ಗೊಬ್ಬರಗಳಿಗೆ ಹೋಲಿಕೆ ಮಾಡಿದಲ್ಲಿ ಯೂರಿಯಾ ರಸಗೊಬ್ಬರದ ಬೆಲೆ ಕಡಿಮೆಯಿರುವುದರಿಂದ ಸಮತೋಲನವಾಗಿ ರಸಗೊಬ್ಬರಗಳನ್ನು ಬಳಸದೇ ಕೇವಲ ಯೂರಿಯಾ ರಸಗೊಬ್ಬರವನ್ನು ಹೆಚ್ಚಾಗಿ ಬಳಸುತ್ತಿರುವುದು ಕಂಡುಬAದಿದೆ ಮತ್ತು ವಿಜ್ಞಾನಿಗಳು ಹಾಗೂ ಇಲಾಖೆಯಿಂದ ಶಿಫಾರಸ್ಸು ಮಾಡಲಾದ ಪ್ರಮಾಣಕ್ಕಿಂತ ರೈತರು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುತ್ತಿರುವುದು ಹಾಗೂ ಕೆಲವು ರೈತರು ಬೆಳೆಯ ವಿವಿಧ ಹಂತಗಳಲ್ಲಿ ಬಳಕೆಗೆ ಬೇಕಾದ ರಸಗೊಬ್ಬರಗಳನ್ನು ಮುಂಗಡವಾಗಿ ಖರೀದಿಸಿ ದಾಸ್ತಾನು ಮಾಡಿಕೊಂಡಿದ್ದಾರೆ.

ಈ ಮೇಲಿನ ಕಾರಣಗಳಿಂದಾಗಿ ಮಾಹೆವಾರು ಯೂರಿಯಾ ರಸಗೊಬ್ಬರದ ಬೇಡಿಕೆ, ಸರಬರಾಜು, ವಿತರಣೆ ಮತ್ತು ದಾಸ್ತಾನು ಇಲಾಖೆಯು ರೂಪಿಸಿದ ಯೋಜನೆಯನುಸಾರ ಇದ್ದಾಗ್ಯೂ ಸಹ ಜಿಲ್ಲೆಯ ರೈತರಿಂದ ಯೂರಿಯಾ ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಪದೇ ಪದೇ ಬರುತ್ತಿರುವುದನ್ನು ಕೃಷಿ ಇಲಾಖೆಯು ಗಂಭೀರವಾಗಿ ಪರಿಗಣಿಸಿ ಮುಂಗಾರು ಪೂರ್ವ ಮತ್ತು ಪ್ರಸಕ್ತ ಮುಂಗಾರಿನಲ್ಲಿ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಜಿಲ್ಲೆಯ ಸಗಟು ಮತ್ತು ಚಿಲ್ಲರೆ ರಸಗೊಬ್ಬರ ಪರಿವೀಕ್ಷಕರು ಅನಿರೀಕ್ಷಿತ ಭೇಟಿ ನೀಡಿ ರಸಗೊಬ್ಬರದ ದಾಸ್ತಾನಿನ ಜೊತೆಗೆ ರಸಗೊಬ್ಬರ ನಿಯಂತ್ರಣ ಆದೇಶ 1985ರಡಿಯ ಎಲ್ಲಾ ಅಂಶಗಳನ್ನು ಪಾಲಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಅಭಿಯಾನ ರೂಪದಲ್ಲಿ ಜಿಲ್ಲೆಯ 450ಕ್ಕೂ ಹೆಚ್ಚು ಮಳಿಗೆಗಳನ್ನು ಸಮಗ್ರವಾಗಿ ತಪಾಸಣೆ ಕೈಗೊಂಡು ಗುಣ ನಿಯಂತ್ರಣದಡಿ ಸುಮಾರು 200ಕ್ಕೂ ಮೇಲ್ಪಟ್ಟು ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಿ ರಸಗೊಬ್ಬರಗಳ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳಲು ಹಾಗೂ ದಾಸ್ತಾನು ಮತ್ತು ವಿತರಣೆಯಲ್ಲಿ ರಸಗೊಬ್ಬರ ವಿತರಕರು ಪಾಲಿಸಬೇಕಾದ ಅಗತ್ಯ ಕ್ರಮಗಳ ಕುರಿತು ಪರವಾನಿಗೆ ಹೊಂದಿರುವುದು, ಬಿಲ್ಲುಗಳನ್ನು ಕಡ್ಡಾಯವಾಗಿ ನೀಡುವ ಬಗ್ಗೆ, ಹೆಚ್ಚಿನ ದರಕ್ಕೆ ಮಾರಾಟ ಮಾಡದಿರುವ ಬಗ್ಗೆ ಹೋಬಳಿ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ವಿವಿಧ ಸಭೆಗಳಲ್ಲಿ ಅಗತ್ಯ ಎಚ್ಚರಿಕೆ ಮತ್ತು ಸೂಚನೆಗಳನ್ನು ಸಹ ನೀಡಲಾಗಿದೆ.

ಜೊತೆಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನಗಳನ್ವಯ ಯೂರಿಯಾ ಗೊಬ್ಬರದ ಅವೈಜ್ಞಾನಿಕ ಬಳಕೆಯ ದುಷ್ಪರಿಣಾಮಗಳು ಮತ್ತು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲಾದ ನ್ಯಾನೋ ರಸಗೊಬ್ಬರಗಳನ್ನು (ವಿಶೇಷವಾಗಿ ನ್ಯಾನೋ ಯೂರಿಯಾ ಮತ್ತು ಡಿ.ಎ.ಪಿ) ಪರ್ಯಾಯವಾಗಿ ಬಳಸುವ ಕುರಿತು ಅರಿವು ಮೂಡಿಸಲಾಗುತ್ತಿದೆ.

ಬೆಳೆಗಳ ಪದ್ಧತಿಯಲ್ಲಿ ಆದ ಹೆಚ್ಚಿನ ಬದಲಾವಣೆ, ಯೂರಿಯಾ ರಸಗೊಬ್ಬರದ ಕಡಿಮೆ ಬೆಲೆ ಮತ್ತು ಸಂಯುಕ್ತ ಗೊಬ್ಬರಗಳ ಹೆಚ್ಚಿನ ಬೆಲೆ ಮುಂಚಿತವಾಗಿ ಆಗಮಿಸಿದ ಮುಂಗಾರು ಹಾಗೂ ತುಂಗಭದ್ರ ನದಿ ನೀರು ಮತ್ತು ರೈತರ ಅವೈಜ್ಞಾನಿಕವಾಗಿ ಬಳಸುತ್ತಿರುವ ಪ್ರಮಾಣದ ಕಾರಣ ಜಿಲ್ಲೆಯಲ್ಲಿನ ಯೂರಿಯಾ ಗೊಬ್ಬರದ ಬೇಡಿಕೆ ಹೆಚ್ಚುತ್ತಿರುತ್ತದೆ. ಜಿಲ್ಲೆಯಲ್ಲಿ ಹೆಚ್ಚಿನ ಕೊರತೆ ಇಲ್ಲದಿದ್ದರೂ ಮಾಹೆವಾರು ರೂಪಿಸಿರುವ ರಸಗೊಬ್ಬರಗಳ ಕಾರ್ಯಕ್ರಮದ ಅನುಸಾರ ಸರಬರಾಜು, ವಿತರಣೆ ಮತ್ತು ದಾಸ್ತಾನನ್ನು ಸರಿದೂಗಿಸಿ ರೈತರಿಗೆ ಅವಶ್ಯವಿರುವ ಯೂರಿಯಾ ಗೊಬ್ಬರದ ಜೊತೆಗೆ ಇತರೆ ಅವಶ್ಯಕತೆ ಗೊಬ್ಬರಗಳನ್ನು ಒದಗಿಸಲು ಇಲಾಖೆಯು ನಿರಂತರ ಕ್ರಮವಹಿಸಲಾಗಿದೆ.

ಮುಂದಿನ ದಿನಗಳಲ್ಲಿ ಉದ್ಭವಿಸಬಹುದಾದ ಬೇಡಿಕೆಯನ್ನು ಸಹ ಈಗಾಗಲೇ ಮಾಹೆ ಹಾಗು ಸರಬರಾಜುದಾರರವಾರು ರೂಪಿಸಿಕೊಂಡಿರುವ ಗುರಿಗಳನ್ವಯ ದಾಸ್ತಾನು ಮಾಡಿ ಸೂಕ್ತ ರೀತಿಯಲ್ಲಿ ವಿತರಿಸಲಾಗುತ್ತದೆ ಹಾಗೂ ಈ ಸಮಯದಲ್ಲಿ ಯಾವುದೇ ಕೃಷಿ ಪರಿಕರ ಮಾರಾಟಗಾರರು ಸಂಬAಧಿಸಿದ ಕಾನೂನುಗಳನ್ನು ಉಲ್ಲಂಘಿಸಿದ್ದಲ್ಲಿ ಅಗತ್ಯ ವಸ್ತುಗಳ ಕಾಯ್ದೆ 1955ರಡಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು.

ರೈತರಿಗೆ ರಸಗೊಬ್ಬರಗಳನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಅಥವಾ ಕೃತಕ ಅಭಾವ ಸೃಷ್ಠಿಸುವ ಪ್ರಸಂಗಗಳು ಕಂಡುಬAದಲ್ಲಿ ಆಯಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರು, ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read