ರೈತರ ಸಾಲ ಮನ್ನಾ: ದೇಶಾದ್ಯಂತ ಟೋಲ್ ಬೂತ್ ರದ್ದು, 75 ರೂ.ಗೆ ಪೆಟ್ರೋಲ್, 500 ರೂ.ಗೆ ಸಿಲಿಂಡರ್: ಡಿಎಂಕೆ ಪ್ರಣಾಳಿಕೆ ರಿಲೀಸ್

ಚೆನ್ನೈ: ಲೋಕಸಭೆ ಚುನಾವಣೆಗೆ ಡಿಎಂಕೆ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದ್ದು, ಹಲವು ಭರವಸೆ ನೀಡಲಾಗಿದೆ. ಡಿಎಂಕೆ ಪ್ರಣಾಳಿಕೆಯಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ದೇಶಾದ್ಯಂತ ಟೋಲ್ ಬೂತ್ ಗಳನ್ನು ರದ್ದುಪಡಿಸಿ ಎಲ್ಲರಿಗೂ ಉಚಿತ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಲಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ರದ್ದುಪಡಿಸಲಾಗುವುದು. 500 ರೂ.ಗೆ ಸಿಲಿಂಡರ್ ವಿತರಿಸಲಾಗುವುದು, ಪೆಟ್ರೋಲ್ ಬೆಲೆ 75 ರೂ., ಡೀಸೆಲ್ ದರ 65 ರೂ.ಗೆ ಇಳಿಕೆ ಮಾಡಲಾಗುವುದು. ರಾಷ್ಟ್ರೀಯ ಶಿಕ್ಷಣ ನೀತಿ, ಒಂದು ದೇಶ ಒಂದು ಚುನಾವಣೆಗೆ ತಡೆ ನೀಡಲಾಗುವುದು.

ತಮಿಳುನಾಡಿನಲ್ಲಿ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ನೀಟ್ ಇರುವುದಿಲ್ಲ, ಮಹಿಳೆಯರಿಗೆ ಮಾಸಿಕ ಒಂದು ಸಾವಿರ ರೂಪಾಯಿ ನೆರವು, ಋತು ಚಕ್ರಕ್ಕೆ ರಜೆ, ರೈತರು, ವಿದ್ಯಾರ್ಥಿಗಳ ಸಾಲ ಮನ್ನಾ, ನರೇಗಾ ಕೂಲಿ ಹೆಚ್ಚಳ ಮಾಡುವುದಾಗಿ ಘೋಷಿಸಲಾಗಿದೆ.

ಅಗ್ನಿಪಥ್ ಯೋಜನೆ, ರಾಜ್ಯಪಾಲರಿಗೆ ಕಾನೂನು ಕ್ರಮದಿಂದ ಇರುವ ರಕ್ಷಣೆ, ಬಿಜೆಪಿ ಸರ್ಕಾರದ ಜನ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುವುದಾಗಿ ತಿಳಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read