BREAKING: ಬ್ಯಾಂಕ್ ಸಾಲ ಕಟ್ಟುವ ಒತ್ತಡದಲ್ಲಿದ್ದ ರೈತರಿಗೆ ಗುಡ್ ನ್ಯೂಸ್: ಸಾಲ ವಸೂಲಿಗೆ ಬ್ರೇಕ್

ಬೆಂಗಳೂರು: ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಅರ್ಹ ರೈತರ ಸಾಲಗಳನ್ನು ಪುನರ್ ರಚಿಸುವಂತೆ ಬ್ಯಾಂಕರ್ ಗಳ ಸಮಿತಿ ಎಲ್ಲಾ ಬ್ಯಾಂಕುಗಳಿಗೆ ಸೂಚನೆ ನೀಡಿದೆ.

ಇದರಿಂದ ರಾಜ್ಯದ ಬರ ಪೀಡಿತ ತಾಲೂಕುಗಳ ರೈತರಿಂದ ಸದ್ಯಕ್ಕೆ ಸಾಲ ವಸೂಲಿ ಮಾಡದಂತೆ ತಡೆ ಸಿಕ್ಕಂತಾಗಿದೆ. ಬರದಿಂದ ಕಂಗಾಲಾದ ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿದ್ದು, ಬರಪೀಡಿತ ಪ್ರದೇಶಗಳಿಂದ ರೈತರ ಸಾಲ ವಸೂಲಿಗೆ ತಾತ್ಕಾಲಿಕ ತಡೆ ನೀಡಲಾಗಿದೆ.

ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು ಬ್ಯಾಂಕುಗಳು ಮುಂದೆ ಬಂದಿದ್ದು, ಅರ್ಹ ರೈತರ ಕೃಷಿ ಮತ್ತು ತೋಟಗಾರಿಕೆ ಬೆಳೆ ಸಾಲ ಪುನರ್ ರಚನೆ ಮಾಡಲಾಗುವುದು. ಇದರಿಂದಾಗಿ ಅಲ್ಪಾವಧಿ ಬೆಳೆ ಸಾಲಗಳು ದೀರ್ಘಾವಧಿ ಸಾಲದ ರೂಪದಲ್ಲಿ ಪರಿವರ್ತನೆಯಾಗುವ ಸಾಧ್ಯತೆ ಇದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read