ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿಮಠ ಶ್ರೀಗಳಿಂದ ರೈತರಿಗೆ ಸಿಹಿ ಸುದ್ದಿ: ಯುಗಾದಿ ನಂತರ ಉತ್ತಮ ಮಳೆ, ಬೆಳೆಯಾಗಲಿದೆ ಎಂದು ಮಾಹಿತಿ

ಕೋಲಾರ: ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿಮಠ ಶ್ರೀಗಳಿಂದ ರೈತರಿಗೆ ಸಿಹಿ ಸುದ್ದಿ ನೀಡಲಾಗಿದೆ. ರಾಜ್ಯದಲ್ಲಿ ಪ್ರಸಕ್ತ ವರ್ಷ ಉತ್ತಮ ಮಳೆ ಬೆಳೆಯಾಗಲಿದೆ ಎಂದು ಅರಸೀಕೆರೆ ಹಾರೋಹಳ್ಳಿ ಸುಕ್ಷೇತ್ರ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಭವಿಷ್ಯ ಹೇಳಿದ್ದಾರೆ.

ಕೋಲಾರ ಜಿಲ್ಲೆ ಮಾಲೂರಿನ ಅಗ್ರಹಾರ ಬೀದಿಯಲ್ಲಿ ಪುರಾತನ ದಕ್ಷಿಣಾಮುಖಿ ಸಾಹಸಾಂಜನೇಯ ಸ್ವಾಮಿ ದೇವಾಲಯ ಅವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ರಾಜ್ಯದಲ್ಲಿ ಯುಗಾದಿ ಹಬ್ಬದವರೆಗೆ ಯಾವುದೇ ರಾಜಕೀಯ ಬದಲಾವಣೆ ಸಾಧ್ಯವಿಲ್ಲ. ಜಾಗತಿಕ ಮಟ್ಟದಲ್ಲಿ ಹೆಚ್ಚಿನ ತೊಂದರೆ ಇದೆ. ಬೆಂಕಿ ದುರಂತ, ಜಲ ದುರಂತ, ಯುದ್ಧಗಳು ಸಂಭವಿಸಿ ಅನೇಕ ಸಾವು ನೋವು ಉಂಟಾಗಲಿದೆ. ಕೋಮುವಾದ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.

ಯುಗಾದಿ ನಂತರ ಅನೇಕ ವಲಯದಲ್ಲಿ ಬದಲಾವಣೆಯಾಗಲಿದ್ದು, ಮೋಡ ಕವಿಯುತ್ತದೆ. ಆಕಾಶ ಮಳೆ ಸುರಿಸುತ್ತದೆ. ಭೂಮಿ ಉತ್ತಮ ಬೆಳೆ ನೀಡಲಿದ್ದು, ರೈತರು ಬೆಳೆಗೆ ಹಾಕಿದ ಬಂಡವಾಳಕ್ಕೆ ಮೋಸ ಇಲ್ಲ. ಜಗತ್ತಿನ ಒಬ್ಬ ಧಾರ್ಮಿಕ ಮುಖಂಡನ ಸಾವು ಸಂಭವಿಸುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read