ಎಕರೆಗೆ 3.50 ಕೋಟಿ ರೂ.ಗೆ ಜಮೀನು ನೀಡಲು ಸಿದ್ದ: ರೈತರಿಂದ ಸಿಎಂಗೆ ಮನವಿ

ಬೆಂಗಳೂರು: ಕೆ.ಐ.ಎ.ಡಿ.ಬಿ.ಗೆ 13 ಗ್ರಾಮಗಳ ಒಟ್ಟು ವಿಸ್ತಿರ್ಣ 1777 ಎಕರೆ ಜಮೀನು ನೀಡುವ ಕುರಿತಂತೆ ರೈತರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಚನ್ನರಾಯಪಟ್ಟಣ ಹೋಬಳಿ 1777 ಎಕರೆ ಜಮೀನನ್ನು ಕೊಡುವುದಕ್ಕೆ 13 ಗ್ರಾಮಗಳ ರೈತರ ಒಪ್ಪಿಗೆಯಿದ್ದು, ಸರ್ಕಾರ ಒಳ್ಳೆಯ ಬೆಲೆ ನಿಗದಿಪಡಿಸಿ ಜಮೀನು ಖರೀದಿ ಮಾಡಲು ವಿನಂತಿಸಲಾಗಿದೆ.

ಪ್ರತಿ ಎಕರೆಗೆ 3.50 ಕೋಟಿ ರೂ. ದರ ನಿಗದಿಪಡಿಸುವುದು.

ಜಮೀನು ಕಳೆದುಕೊಂಡ ರೈತ ಮಕ್ಕಳಿಗೆ ವಿದ್ಯಾಭ್ಯಾಸ ಅನುಗುಣವಾಗಿ ಉದ್ಯೋಗ ನೀಡುವುದು

ಯಾವುದೇ ಕಾರಣಕ್ಕೂ ಹಸಿರು ವಲಯವಾಗಿ ಪರಿವರ್ತಿಸಬಾರದು

ಗ್ರಾಮದ ಅಕ್ಕಪಕ್ಕ ಉಳಿದ ಜಮೀನುಗಳನ್ನು ಹಳದಿ ವಲಯವನ್ನಾಗಿ ಪರಿವರ್ತಿಸಬೇಕು ಎಂದು ಮನವಿ ಮಾಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ಧರಾಮಯ್ಯ, ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿಯಿಂದ ಆಗಮಿಸಿದ್ದ ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳು ಇಂದು ನನ್ನನ್ನು ಭೇಟಿಮಾಡಿ 449 ಎಕರೆ ಭೂಮಿಯನ್ನು ತಾವು ನೀಡಲು ಸಿದ್ಧವಿರುವುದಾಗಿ ತಿಳಿಸಿ, ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ನ್ಯಾಯಯುತವಾದ ಬೆಲೆ ನಿಗದಿ ಪಡಿಸಲು ಮನವಿಪತ್ರ ಸಲ್ಲಿಸಿದರು ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read