ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು

ವಿಜಯಪುರ: ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಗ್ರಾಮದ ಬಳಿ ಜಮೀನಿನಲ್ಲಿ ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವನ್ನಪ್ಪಿದ್ದಾರೆ.

ನೀಲಮ್ಮ ಕಿಲಾರಹಟ್ಟಿ(16), ಮುತ್ತಪ್ಪ ಕಿಲಾರಹಟ್ಟಿ(24) ಶಿವ ಯಾಳವಾರ(25) ಮೃತಪಟ್ಟವರು ಎಂದು ಹೇಳಲಾಗಿದೆ. ಚಿನ್ನಪ್ಪ ತಳವಾರನ ಜಮೀನಿನಲ್ಲಿ ಘಟನೆ ನಡೆದಿದೆ.

ಎಮ್ಮೆಗಳನ್ನು ಮೇಯಿಸಲು ಹೋಗಿದ್ದ ನೀಲಮ್ಮ ನೀರು ಕುಡಿಸಲು ಹೋಗಿ ಆಕಸ್ಮಿಕವಾಗಿ ನೀರಿನ ಗುಂಡಿಗೆ ಬಿದ್ದಿದ್ದಾರೆ. ನೀಲಮ್ಮನನ್ನು ರಕ್ಷಿಸಲು ಹೋದ ಮುತ್ತಪ್ಪ ಕಿಲಾರಹಟ್ಟಿ ಕೂಡ ನೀರಿನ ಗುಂಡಿಯಿಂದ ಹೊರಬರಲಾರದೆ ಇಬ್ಬರು ಪರದಾಟ ನಡೆಸಿದ್ದಾರೆ. ನೀಲಮ್ಮ ಮತ್ತು ಮುತ್ತಪ್ಪ ಅವರನ್ನು ರಕ್ಷಿಸಲು ಶಿವು ಯಾಳವಾರ ನೀರಿನ ಗುಂಡಿಗೆ ಇಳಿದಿದ್ದು, ಹೊರ ಬರಲಾರದೆ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು, ಸ್ಥಳೀಯರ ಮೂವರ ಶವಗಳನ್ನು ಮೇಲೆ ತಂದಿದ್ದಾರೆ. ಮುದ್ದೆಬಿಹಾಳ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read