ಫರೀದಾಬಾದ್: ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತ ಮತ್ತು ಹೃದಯ ಸ್ತಂಭನ ಪ್ರಕರಣಗಳು ಸಾಕಷ್ಟು ಸಾಮಾನ್ಯವಾಗಿದೆ. ಈ ಘಟನೆಗಳು ಆತಂಕಕಾರಿಯಾಗಿ ಹೆಚ್ಚುತ್ತಿವೆ.
ಹರಿಯಾಣದ ಫರೀದಾಬಾದ್‌ನಲ್ಲಿರುವ ಫಾರ್ಮಸಿಯೊಂದರಲ್ಲಿ ಯುವಕ ಮೃತಪಟ್ಟಿರುವ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ. 4 ನಿಮಿಷದಲ್ಲಿ ವ್ಯಕ್ತಿ ಕುಸಿದು ಬಿದ್ದಿದ್ದು, ಇಡೀ ಘಟನೆ ಔಷಧಾಲಯದಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ವೈರಲ್ ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ಅಂಗಡಿಯವನಿಗೆ ಔಷಧಿ ಕೇಳುತ್ತಿರುವುದನ್ನು ಕಾಣಬಹುದು. ಸ್ವಲ್ಪ ಸಮಯದ ನಂತರ, ಅವನು ಔಷಧಿಗೆ ಹಣ ಪಾವತಿಸಲು ಪ್ರಯತ್ನಿಸಿದಾಗ, ಅವನು ನೆಲದ ಮೇಲೆ ಕುಸಿದು ಬೀಳುತ್ತಾನೆ.
ನೆಲಕ್ಕೆ ಕುಸಿಯುವ ಮೊದಲು ತನ್ನ ಎದೆಯನ್ನು ಹಿಡಿದುಕೊಂಡಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅಲ್ಲಿಯೇ ಕುಸಿದು ಬಿದ್ದಾಗ ಅಂಗಡಿಯವ ಓಡಿಹೋಗಿ ಎಬ್ಬಿಸುವಷ್ಟರಲ್ಲಿ ಆತ ಮೃತಪಟ್ಟಿದ್ದ.
https://twitter.com/mithilesh501/status/1611290351960219648?ref_src=twsrc%5Etfw%7Ctwcamp%5Etweetembed%7Ctwterm%5E1611290351960219648%7Ctwgr%5E756f6a20e821e2ab374c6bd85943c3a9ccdf98f6%7Ctwcon%5Es1_&ref_url=https%3A%2F%2Fwww.dnaindia.com%2Findia%2Freport-faridabad-man-dies-of-heart-attack-on-cctv-camera-went-to-buy-medicine-3015323