ತಮ್ಮ ಪತಿ ಸಲಿಂಗಿ ಎಂದು ಭಾವಿಸಿದ್ದರಂತೆ ʼನೃತ್ಯ ನಿರ್ದೇಶಕಿʼ ಫರ್ಹಾ ಖಾನ್‌…!

ಬಾಲಿವುಡ್‌ನ ಪ್ರಸಿದ್ಧ ನಿರ್ದೇಶಕಿ ಫರ್ಹಾ ಖಾನ್ ತಮ್ಮ ಪತಿ ಶಿರಿಷ್ ಕುಂದರ್‌ರ ಬಗ್ಗೆ ಆಶ್ಚರ್ಯಕರವಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ತಮ್ಮ ಮದುವೆಯ ಆರಂಭದಲ್ಲಿ ಶಿರಿಷ್ ಸಲಿಂಗಿ ಎಂದು ತಾವು ಭಾವಿಸಿದ್ದೆ ಎಂದು ಹೇಳಿದ್ದಾರೆ.

ಫರ್ಹಾ ಮತ್ತು ಶಿರಿಷ್ ಕುಂದರ್ ದಂಪತಿಗಳು 20 ವರ್ಷಗಳಿಂದ ವೈವಾಹಿಕ ಜೀವನ ನಡೆಸುತ್ತಿದ್ದಾರೆ. ಫರ್ಹಾ ಖಾನ್‌, ತಮ್ಮ ಮೊದಲ ನಿರ್ದೇಶನದ ಚಿತ್ರವಾದ ‘ಮೈ ಹೂನ್ ನಾ’ ದಲ್ಲಿ ಶಿರಿಷ್ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾಗ ಇಬ್ಬರ ಪರಿಚಯವಾಗಿತ್ತು. ಆದರೆ, ಅವರ ಪ್ರೇಮಕಥೆ ಸುಲಭವಾಗಿ ಆರಂಭವಾಗಿರಲಿಲ್ಲ.

“ಆರಂಭದ ಆರು ತಿಂಗಳು ನಾನು ಅವರು ಸಲಿಂಗಿ ಎಂದು ಭಾವಿಸಿದ್ದೆ” ಎಂದು ಫರ್ಹಾ ಖಾನ್‌ ಹೇಳಿದ್ದಾರೆ. ಶಿರಿಷ್ ಕೋಪಗೊಂಡಾಗ ಅದು ತುಂಬಾ ಕಿರಿಕಿರಿಯಾಗುತ್ತಿತ್ತು ಎಂದು ಅವರು ಹೇಳಿದರು.

ಫರ್ಹಾ ಖಾನ್‌ ಮತ್ತು ಶಿರಿಷ್ ಅವರ ಮದುವೆಯ ಬಗ್ಗೆ ಮಾತನಾಡುತ್ತಾ, ಅವರು ಇಬ್ಬರೂ ಜಗಳವಾಡಿದಾಗ ಇಬ್ಬರೂ ಕ್ಷಮೆ ಕೇಳುವುದಿಲ್ಲ ಎಂದು ಹೇಳಿದರು. “ಶಿರಿಷ್ ಇನ್ನೂವರೆಗೂ ನನ್ನ ಬಳಿ ಕ್ಷಮೆ ಕೇಳಿಲ್ಲ” ಎಂದು ಫರ್ಹಾ ಖಾನ್‌ ಹಾಸ್ಯ ಮಾಡಿದ್ದಲ್ಲದೇ “ಏಕೆಂದರೆ ಅವರು ಎಂದಿಗೂ ತಪ್ಪು ಮಾಡುವುದಿಲ್ಲ” ಎಂದಿದ್ದಾರೆ.

ಫರಾಹ್ ಮತ್ತು ಶಿರಿಷ್ ದಂಪತಿಗಳಿಗೆ ಮೂವರು ಮಕ್ಕಳಿದ್ದಾರೆ. ಐವಿಎಫ್ ಮೂಲಕ ಅವರು ಮಕ್ಕಳನ್ನು ಪಡೆದುಕೊಂಡಿದ್ದರು. ಫರ್ಹಾ ಖಾನ್‌ ಮತ್ತು ಶಿರಿಷ್ ಅವರ ವಿವಾಹಿತ ಜೀವನವು ಪ್ರತಿಯೊಂದು ದಂಪತಿಗಳಂತೆ ಅನೇಕ ಏರಿಳಿತಗಳನ್ನು ಕಂಡಿದೆ. ಅವರ ಪ್ರೇಮಕಥೆಯು ಪ್ರತಿಯೊಬ್ಬರನ್ನು ಸ್ಫೂರ್ತಿಗೊಳಿಸುವಂತಹದ್ದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read