ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ‘ಬಿಗ್ ಬಾಸ್’ OTT 3 ಈಗ ಪ್ರಸಾರವಾಗುತ್ತಿದ್ದು, ಟಾಸ್ಕ್ ನಡೆಯುವಾಗಲೇ ಸ್ಪರ್ದಿಯೊಬ್ಬರ ಹಿಂಭಾಗದಲ್ಲಿ ಕಪ್ಪು ಬಣ್ಣದ ಹಾವು ಚಲಿಸುತ್ತಿರುವುದು ಕಂಡುಬಂದಿದ್ದು, ಹೀಗಾಗಿ ಸ್ಪರ್ಧಿಗಳ ಸುರಕ್ಷತೆ ಕುರಿತು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಹಾವು ಚಲಿಸುತ್ತಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಸ್ಪರ್ಧಿಗಳ ಪೈಕಿ ಒಬ್ಬರಾದ ಲವ್ಕೇಶ್ ಕಟಾರಿಯಾ ಟಾಸ್ಕ್ ಭಾಗವಾಗಿ ಕೈಗಳನ್ನು ಕಟ್ಟಿಸಿಕೊಂಡು ನೆಲದ ಮೇಲೆ ಕುಳಿತಿದ್ದು ಈ ವೇಳೆ ಅವರ ಹಿಂಭಾಗದಲ್ಲಿ ಹಾವು ಚಲಿಸುತ್ತಿರುವುದು ಕಂಡುಬಂದಿದೆ. ಆದರೆ ಇದರ ಅರಿವೇ ಅವರಿಗೆ ಇರುವುದಿಲ್ಲ. ಆದರೆ ಈ ದೃಶ್ಯ ಹದ್ದಿನ ಕಣ್ಣಿನಿಂದ ವೀಕ್ಷಿಸುತ್ತಿರುವ ಪ್ರೇಕ್ಷಕರ ಗಮನಕ್ಕೆ ಬಂದಿದೆ.
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಲಾಗಿದ್ದು, ಇದು ವೈರಲ್ ಆಗುತ್ತಿದ್ದಂತೆ ಸ್ಪರ್ಧಿಗಳ ಸುರಕ್ಷತೆ ಕುರಿತು ಆತಂಕ ವ್ಯಕ್ತಪಡಿಸಿರುವ ವೀಕ್ಷಕರು ‘ಬಿಗ್ ಬಾಸ್’ ನಿರ್ಮಾಪಕರು ಕೂಡಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಆದರೆ ಹಾವು ಚಲಿಸುತ್ತಿರುವ ವಿಡಿಯೋ ಕುರಿತಂತೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಜಿಯೋ ಸಿನಿಮಾ ತಂಡ, ಸ್ಪರ್ಧಿಗಳ ಸುರಕ್ಷತೆ ಕುರಿತಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗ ಹರಿದಾಡುತ್ತಿರುವ ವಿಡಿಯೋ ಎಡಿಟೆಡ್ ಎಂದು ತಿಳಿಸಿದೆ.
https://twitter.com/Priyankavatsh/status/1810529713439547436?ref_src=twsrc%5Etfw%7Ctwcamp%5Etweetembed%7Ctwterm%5E1810529713439547436%7Ctwgr%5E585d450506e74b7ef13e002a0fa7f3205b61458e%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fvideofansspotblacksnakeinsidebiggbossott3houseslammakersoversafetyofcontestants-newsid-n621266833