ಭಾನುವಾರ ಟೈಗರ್ 3 ವೀಕ್ಷಿಸಲು ಹೋಗಿದ್ದ ಸಿನಿ ಪ್ರೇಮಿಗಳು ಮಾಲೆಗಾಂವ್ ಚಿತ್ರಮಂದಿರದೊಳಗೆ ಪಟಾಕಿ ಸಿಡಿಸಿದ್ದರಿಂದ ಶಾಕ್ ಆಗಿದ್ದಾರೆ. ಹೌದು. ಸಲ್ಮಾನ್ ಅಭಿಮಾನಿಗಳು ಥಿಯೇಟರ್ ಒಳಗೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಟೈಗರ್ 3 ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಮುಖ್ಯ ಪಾತ್ರಗಳಲ್ಲಿದ್ದಾರೆ. ಸಿನಿಮಾ ವೀಕ್ಷಣೆ ವೇಳೆ ಅಭಿಮಾನಿಗಳು ಥಿಯೇಟರ್ ಒಳಗೆ ದೊಡ್ಡ ದೊಡ್ಡ ಪಟಾಕಿ ಸಿಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.
ಪಟಾಕಿಗಳ ಕಿಡಿಗಳು ಸಿನಿಮಾ ನೋಡುತ್ತಿದ್ದವರ ಮೇಲೆಯೇ ಬಿದ್ದಿದೆ. ಸಿನೆಮಾ ಹಾಲ್ ನಲ್ಲಿ ಅಭಿಮಾನಿಗಳು ಪಟಾಕಿಗಳನ್ನು ಸಿಡಿಸುತ್ತಿರುವ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.
ಸಲ್ಮಾನ್ ಖಾನ್ ಪರದೆಯ ಮೇಲೆ ಪ್ರವೇಶಿಸುತ್ತಿದ್ದಂತೆ ಅಭಿಮಾನಿಗಳು ಹಲವಾರು ಪಟಾಕಿಗಳನ್ನು ಸಿಡಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಕಿಡಿಗಳು ಹಾರಾಡುತ್ತಿದ್ದಂತೆ, ಪ್ರೇಕ್ಷಕರು ಹೆದರಿ ನಿರ್ಗಮನದ ಕಡೆಗೆ ಓಡಿದರು.
https://twitter.com/i_yogesh22/status/1723755312807875021?ref_src=twsrc%5Etfw%7Ctwcamp%5Etweetembed%7Ctwterm%5E1723756467516551668%7Ctwgr%5E16de9d4d1b0adae76c71f5aa59e8514fa765d2a6%7Ctwcon%5Es2_&ref_url=https%3A%2F%2Findianexpress.com%2Farticle%2Fentertainment%2Fbollywood%2Ffans-burst-firecrackers-inside-theatre-playing-salman-khans-tiger-3-audience-runs-for-cover-9024333%2F