ಬಿಟಿಎಸ್​ ನೃತ್ಯ ಗ್ರೂಪ್​ಗೆ ಬಾಲಿವುಡ್​ ಹಾಡು: ನೆಟ್ಟಿಗರು ಫಿದಾ

ಕೆ-ಪಾಪ್​ ಸೂಪರ್‌ಗ್ರೂಪ್ ಬಿಟಿಎಸ್​ ನೃತ್ಯ ಗ್ರೂಪ್​ ಬಳಸಿಕೊಂಡು ಇದಾಗಲೇ ಬಾಲಿವುಡ್ ಹಾಡುಗಳನ್ನು ಮರುಸೃಷ್ಟಿ ಮಾಡಿರುವ ಹಲವಾರು ವಿಡಿಯೋಗಳು ವೈರಲ್​ ಆಗುತ್ತಿವೆ.

ಇದೀಗ ಬಾಲಿವುಡ್​ ಹಾಡೊಂದಕ್ಕೆ ಸ್ಟೆಪ್‌ ಹಾಕುವ ಮೂಲಕ ಫುಟ್ ಟ್ಯಾಪಿಂಗ್ ಟ್ರ್ಯಾಕ್‌ಗಳೊಂದಿಗೆ ಹೊಸ ವಿಡಿಯೋ ಸೃಷ್ಟಿಸಿದ್ದು, ಅದೀಗ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಅಭಿನಯದ ಪೆಪ್ಪಿ ಟ್ರ್ಯಾಕ್ ಮೌಜಾ ಹಿ ಮೌಜಾ ಹಾಡನ್ನು ಬಿಟಿಎಸ್ ಪ್ರದರ್ಶಿಸಿದ ಅನ್ಪನ್‌ಮನ್ ನೃತ್ಯಕ್ಕೆ ಸಂಯೋಜಿಸಲಾಗಿದ್ದು, ಇದೀಗ ಭಾರಿ ವೈರಲ್​ ಆಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಶೇರ್​ ಮಾಡಲಾಗಿದೆ. ಈ ಕುತೂಹಲದ ವಿಡಿಯೋಗೆ ಜನರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದನ್ನು ಸೃಷ್ಟಿ ಮಾಡಿದವರಿಗೆ ಹ್ಯಾಟ್ಸ್​ ಆಫ್​ ಹೇಳುತ್ತಿದ್ದಾರೆ. ಇಂದಿನ ತಂತ್ರಜ್ಞಾನದ ಯುಗದಲ್ಲಿ ಏನು ಬೇಕಾದರೂ ಮಾಡಲು ಸಾಧ್ಯ ಎಂಬುದನ್ನು ಇದು ತೋರಿಸುತ್ತದೆ ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಬುದ್ಧಿವಂತಿಕೆಯನ್ನು ಬಳಸಿ ಇನ್ನೂ ಏನೇನೋ ಸಾಧಿಸಬಹುದು ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read