ಬೆಂಗಳೂರು : ಖ್ಯಾತ ನಿರೂಪಕಿ ಅನುಶ್ರೀ ಮದುವೆ ಫಿಕ್ಸ್ ಆಗಿದೆ. ಹೌದು. ಜೀ ಕನ್ನಡ ವಾಹಿನಿಯ ಖ್ಯಾತ ನಿರೂಪಕಿ ಅನುಶ್ರೀ ಮದುವೆ ಫಿಕ್ಸ್ ಆಗಿದ್ದು, ಆಗಸ್ಟ್ 28 ರಂದು ಮದುವೆಯಾಗಲಿದ್ದಾರೆ.
ಮಾತಿನ ಮಲ್ಲಿ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರ ಮದುವೆ ಸುದ್ದಿ ಹಲವು ಬಾರಿ ವೈರಲ್ ಆಗಿತ್ತು. ಹಲವು ವರ್ಷಗಳಿಂದ ಅನುಶ್ರೀ ಮದುವೆ ಯಾವಾಗ ಎಂದು ಅಭಿಮಾನಿಗಳು ಕೇಳುತ್ತಿದ್ದರು. ಇದೀಗ ಅಧಿಕೃತವಾದ ಮಾಹಿತಿ ಪ್ರಕಾರ ಖ್ಯಾತ ನಿರೂಪಕಿ ಅನುಶ್ರೀ ಮದುವೆ ಫಿಕ್ಸ್ ಆಗಿದೆ.
ಫ್ಯಾಮಿಲಿ ನೋಡಿದ ಹುಡುಗನ ಜೊತೆ ಅನುಶ್ರೀ ಸಪ್ತಪದಿ ತುಳಿಯಲಿದ್ದು, ಹುಡುಗ ಐಟಿ ಕಂಪನಿ ಉದ್ಯೋಗಿ ಎಂದು ತಿಳಿದು ಬಂದಿದೆ. ಈ ಬಗ್ಗೆ ಅನುಶ್ರೀ ಅವರು ಅಧಿಕೃತವಾಗಿ ಮಾಹಿತಿ ನೀಡುವವರೆಗೂ ಇದು ಕೂಡ ನಿಜ ಅಂತ ಹೇಳೋಕಾಗಲ್ಲ..ಯಾವುದಕ್ಕೂ ಕಾದು ನೋಡಬೇಕಾಗಿದೆ.
