ಬೆಂಗಳೂರು : ಖ್ಯಾತ ನಿರೂಪಕಿ ಅನುಶ್ರೀ ಸದ್ಯದಲ್ಲೇ ಮದುವೆ ಆಗ್ತಿದ್ದಾರೆ. ಹೌದು. ಜೀ ಕನ್ನಡ ವಾಹಿನಿಯ ಖ್ಯಾತ ನಿರೂಪಕಿ ಅನುಶ್ರೀ ಮದುವೆ ಫಿಕ್ಸ್ ಆಗಿದ್ದು, ಆಗಸ್ಟ್ 28 ರಂದು ಹಸೆಮಣೆ ಏರಲಿದ್ದಾರೆ.ಕೊಡಗು ಮೂಲದ ರೋಷನ್ ಎಂಬುವವರ ಜೊತೆ ಅನುಶ್ರೀ ಮದುವೆ ಆಗಲಿದ್ದಾರೆ.
ಇದರ ನಡುವೆ ಅನುಶ್ರೀ ಮದುವೆಯಾಗಲಿದ್ದಾರೆ ಎನ್ನಲಾದ ಹುಡುಗನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋವನ್ನು ಅನುಶ್ರೀ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೊಡಗು ಮೂಲದ ರೋಷನ್ ಎಂಬುವವರ ಜೊತೆ ಅನುಶ್ರೀ ಮದುವೆ ಆಗಲಿದ್ದಾರೆ. ಅನುಶ್ರೀ ಹಾಗೂ ರೋಷನ್ ಒಟ್ಟಿಗೆ ಇರುವ ಫೋಟೋ ವೈರಲ್ ಆಗಿದೆ. ಆದರೆ ಅನುಶ್ರೀ ಮಾತ್ರ ಮದುವೆ ಬಗ್ಗೆ ಆಗಲಿ, ಮದುವೆ ಆಗಲಿರುವ ಹುಡುಗನ ಬಗ್ಗೆ ಆಗಲಿ ಯಾವುದೇ ಕ್ಲಾರಿಟಿ ಕೊಟ್ಟಿಲ್ಲ. ಅದೇನೆ ಇರಲಿ ”ಸಿಂಗಲ್ ಆಗಿದ್ದ ನಮ್ಮಕ್ಕ ಮಿಂಗಲ್” ಆಗ್ತಿದ್ದಾರೆ ಅಂತ ಫ್ಯಾನ್ಸ್ ಅಂತೂ ಸಖತ್ ಖುಷಿಯಾಗಿದ್ದಾರೆ.
ಅನುಶ್ರೀ ಮದುವೆ ಸೆಟ್ಟಾಯ್ತು ಅಂತ ಹಿಂದೆ ಸಿಕ್ಕಾಪಟ್ಟೆ ಸುದ್ದಿಗಳು ವೈರಲ್ ಆಗಿತ್ತು. ಹಲವು ವರ್ಷಗಳಿಂದ ಅನುಶ್ರೀ ಮದುವೆ ಯಾವಾಗ ಎಂದು ಅಭಿಮಾನಿಗಳು ಕೇಳುತ್ತಿದ್ದರು. ಅಂತೂ ಇಂತೂ ‘ಮಾತಿನ ಮಲ್ಲಿ’ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ .
ಕುಟುಂಬದವರು ನೋಡಿದ ಹುಡುಗನ ಜೊತೆ ಅನುಶ್ರೀ ಸಪ್ತಪದಿ ತುಳಿಯಲಿದ್ದು, ಹುಡುಗ ಐಟಿ ಕಂಪನಿ ಉದ್ಯೋಗಿ ಅಂತ ಹೇಳಲಾಗ್ತಿದೆ. ಈ ಬಗ್ಗೆ ಅನುಶ್ರೀ ಅವರೇ ಅಧಿಕೃತವಾಗಿ ಹೇಳೋತಂಕ ಇದು ಕೂಡ ನಿಜ ಅಂತ ಹೇಳೋಕಾಗಲ್ಲ..ಯಾವುದಕ್ಕೂ ಕಾದು ನೋಡೋಣ.!
