?> ಕೌಟುಂಬಿಕ ಕಲಹ : ನಾಲ್ವರು ಮಕ್ಕಳನ್ನು ಕಾಲುವೆಗೆ ಎಸೆದ ಪಾಪಿ ತಾಯಿ - KannadaDunia.com

ಕೌಟುಂಬಿಕ ಕಲಹ : ನಾಲ್ವರು ಮಕ್ಕಳನ್ನು ಕಾಲುವೆಗೆ ಎಸೆದ ಪಾಪಿ ತಾಯಿ

ಕೌಟುಂಬಿಕ ಕಲಹದಿಂದ ತಾಯಿ ತನ್ನ ನಾಲ್ವರು ಮಕ್ಕಳನ್ನು ಕಾಲುವೆಗೆ ಎಸೆದ ಘೋರ ಘಟನೆ ನಾಗರ್ ಕರ್ನೂಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.ಕೌಟುಂಬಿಕ ಕಲಹದಿಂದಾಗಿ ತಾಯಿಯೊಬ್ಬಳು ಈ ಕೃತ್ಯ ಎಸಗಿದ್ದಾಳೆ.

ನಾಗರ್ ಕರ್ನೂಲ್ ಜಿಲ್ಲೆಯ ಬಿಜಿನೆಪಲ್ಲಿ ಮಂಡಲದಲ್ಲಿ ಶನಿವಾರ ಈ ಘಟನೆ ನಡೆದಿದೆ. ಮಂಗನೂರು ಗ್ರಾಮದ ಸರವಾನಂದ ಮತ್ತು ಎರ್ರಗುಂಟ ತಾಂಡಾದ ಲಲಿತಾ (33) ಎಂಟು ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ಅವರಿಗೆ ಒಬ್ಬ ಮಗ ಮತ್ತು ಮೂವರು ಪುತ್ರಿಯರಿದ್ದಾರೆ. ಕೆಲವು ಸಮಯದಿಂದ ಅವರ ಕುಟುಂಬದಲ್ಲಿ ಕೌಟುಂಬಿಕ ಕಲಹ ನಡೆಯುತ್ತಿತ್ತು.

ಕೆಎಲ್ಐ ಕಾಲುವೆಗೆ ಹೋಗಿ ತನ್ನ ನಾಲ್ಕು ಮಕ್ಕಳನ್ನು ತಾಯಿ ಎಸೆದಿದ್ದಾಳೆ. ಅದರಲ್ಲಿ ಲಲಿತಾ ಕೂಡ ಜಿಗಿಯಲು ಪ್ರಯತ್ನಿಸಿದಳು ಆದರೆ ಸ್ಥಳೀಯರು ತಡೆದಿದ್ದಾರೆ. ಮೃತರನ್ನು ಮಹಾಲಕ್ಷ್ಮಿ (5), ಸಾತ್ವಿಕಾ (4) ಮತ್ತು ಮಂಜುಳಾ (3) ಎಂದು ಗುರುತಿಸಲಾಗಿದೆ.ಬಾಬು ಮಾರ್ಕಂಡೇಯ (7 ತಿಂಗಳು) ಎಂಬ ಮಗು ಕಾಣೆಯಾಗಿದ್ದು, ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read