ಬೆಂಗಳೂರು: ಪೊಲೀಸ್ ಅಧಿಕಾರಿ ಸೋಗಿನಲ್ಲಿ ಬಂದು ಕಾರಿನ ಸೈರನ್ ಮೊಳಗಿಸಿ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬೆಂಗಳೂರಿನ ಪುಲಕೇಶಿನಗರ ಪೊಲೀಸರು ಬಂಧಿಸಿದ್ದಾರೆ.
ನಿತುಲ್ ರಾಜ್ ಬಂಧಿತ ಕ್ಯಾಬ್ ಚಾಲಕ. ಕಳೆದ ವಾರ ಸಂತೋಶ್ ಎಂಬುವವರು ಕಾರಿನಲ್ಲಿ ಹೋಗುತ್ತಿದ್ದಾಗ ಆರೋಪಿಯ ಕಾರಿಗೆ ಟಚ್ ಆಗಿತ್ತು. ಕಾರು ನಿಲ್ಲಿಸದೇ ಹೋಗಿದ್ದಕ್ಕೆ ಆಕ್ರೋಶಗೊಂಡ ಆರೋಪಿ, ಸೈರನ್ ಮೊಳಗಿಸಿ ಕಾರನ್ನು ಅಡ್ಡಹಾಕಿದ್ದಾನೆ.
ಅಲ್ಲದೇ ತಾನು ಪೊಲೀಸ್ ಅಧಿಕಾರಿ ಎಂದು ಹೇಳಿ ಅವಾಚ್ಯ ಶಬ್ದಗಳಿಂದನಿಂದಿಸಿ ಸಂತೋಷ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಈ ಬಗ್ಗೆ ಸಂತೋಷ್ ಪುಲಕೇಶಿ ನಗರ ಠಣೆಯಲ್ಲಿ ದೂರು ನೀಡಿದ್ದರು. ಸಿಸಿಟಿವಿ ಕ್ಯಾಮರಾ ಆಧರಿಸಿ ಆರೋಪಿಯ ಕಾರನ್ನು ಪತ್ತೆ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.