BIG NEWS: ನಕಲಿ ಜಿಎಸ್‌ಟಿ ನೋಂದಣಿ ತಡೆಗೆ ‘ಆಧಾರ್ ಬಯೋಮೆಟ್ರಿಕ್: ರಾಜ್ಯದೆಲ್ಲೆಡೆ 120 ಸೇವಾ ಕೇಂದ್ರ ಆರಂಭ

ಬೆಂಗಳೂರು: ನಕಲಿ ಜಿಎಸ್‌ಟಿ ನೋಂದಣಿ ತಡೆಯಲು ರಾಜ್ಯದ ವಿವಿಧೆಡೆ ಆಧಾರ್ ಬಯೋಮೆಟ್ರಿಕ್ ಮೂಲಕ ನೋಂದಣಿ ಮಾಡುವ 120 ಜಿಎಸ್‌ಟಿ ಸೇವಾ ಕೇಂದ್ರಗಳನ್ನು ವಾಣಿಜ್ಯ ತೆರಿಗೆ ಇಲಾಖೆ ಆರಂಭಿಸಿದೆ.

ಬೆಂಗಳೂರಿನ ಗಾಂಧಿನಗರದಲ್ಲಿರುವ ಕೇಂದ್ರ ಕಚೇರಿ ಸೇರಿ ರಾಜ್ಯದ 120 ಕಡೆ ಸೇವಾ ಕೇಂದ್ರ ಆರಂಭಿಸಲಾಗಿದ್ದು, ಅರ್ಜಿದಾರರು ಮುಂಗಡವಾಗಿ ಸಮಯ ನಿಗದಿಪಡಿಸಿಕೊಂಡು ಸೇವಾ ಕೇಂದ್ರಕ್ಕೆ ಭೇಟಿ ನೀಡಬಹುದಾಗಿದೆ. ಬಯೋಮೆಟ್ರಿಕ್ ದೃಢೀಕರಣ ಮತ್ತು ದಾಖಲೆಗಳ ಪರಿಶೀಲನೆ ನಡೆಸಲಾಗುವುದು. ಇದರಿಂದ ಅಮಾಯಕರ ದಾಖಲೆ ಬಳಸಿಕೊಂಡು ನಕಲಿ ಜಿಎಸ್​ಟಿ ನೋಂದಣಿ ಮಾಡುವುದನ್ನು ತಡೆಯಬಹುದಾಗಿದೆ. ಜೊತೆಗೆ ರಾಜ್ಯದಲ್ಲಿ ಉತ್ತಮ ವ್ಯವಹಾರ ವಾತಾವರಣಕ್ಕೆ ಉತ್ತೇಜನ ಸಿಗಲಿದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read