BREAKING: ಖ್ಯಾತ ನಟ ಸಂಜಯ್ ದತ್ ‘ಮುನ್ನಾಭಾಯ್ ಎಂಬಿಬಿಎಸ್’ ರೀತಿಯ ಘಟನೆ ಬೆಳಕಿಗೆ: 50 ಆಪರೇಷನ್ ಮಾಡಿದ್ದ ನಕಲಿ ವೈದ್ಯ ಅರೆಸ್ಟ್

ಗುವಾಹಟಿ: 10 ವರ್ಷಕ್ಕೂ ಹೆಚ್ಚು ಕಾಲದಿಂದ ಸ್ತ್ರೀರೋಗ ತಜ್ಞನ ಹೆಸರಲ್ಲಿ ಕಾರ್ಯನಿರ್ವಹಿಸುತ್ತಿದ್ದ, 50ಕ್ಕೂ ಹೆಚ್ಚು ಆಪರೇಷನ್ ಮಾಡಿದ್ದ ನಕಲಿ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ.

ಖ್ಯಾತ ನಟ ಸಂಜಯ್ ದತ್ ಅಭಿನಯದ ಜನಪ್ರಿಯ ಚಿತ್ರ ಮುನ್ನಾಭಾಯ್ ಎಂಬಿಬಿಎಸ್ ಸಿನಿಮಾ ಶೈಲಿಯ ಘಟನೆ ಇದಾಗಿದೆ.

ಅಸ್ಸಾಂನ ಶ್ರೀಭೂಮಿ ಜಿಲ್ಲೆಯ ನಿವಾಸಿ ಪುಲೋಕ್ ಮಾಲಕರ್ ಬಂಧಿತ ಆರೋಪಿ. ಅಸ್ಸಾಂನ ಸಿಲ್ವಾರ್ ಜಿಲ್ಲೆಯ ಎರಡು ಖಾಸಗಿ ಆಸ್ಪತ್ರೆಗಳಲ್ಲಿ ಸ್ತ್ರೀರೋಗ ತಜ್ಞನ ಸೋಗಿನಲ್ಲಿ 50ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ಮಾಡಿದ್ದಾನೆ. ಸಿಸೇರಿಯನ್ ಮಾಡುತ್ತಿದ್ದ ಆಪರೇಷನ್ ಥಿಯೇಟರ್ ನಲ್ಲಿಯೇ ನಕಲಿ ವೈದ್ಯನನ್ನು ಬಂಧಿಸಲಾಗಿದೆ.

ಈತನ ಶಿಕ್ಷಣದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಬಂದ ಮಾಹಿತಿ ಆಧಾರದಲ್ಲಿ ಪೊಲೀಸರು ತನಿಖೆ ಕೈಗೊಂಡು ಪುಲೋಕ್ ಮಾಲಕರ್ ನನ್ನು ಬಂಧಿಸಲಾಗಿದೆ. ಆತನ ಎಲ್ಲಾ ಪ್ರಮಾಣ ಪತ್ರಗಳು ನಕಲಿ ಎನ್ನುವುದು ಗೊತ್ತಾಗಿದೆ. ಈತ ನಕಲಿ ವೈದ್ಯನಾಗಿದ್ದು ಅನೇಕ ವರ್ಷಗಳಿಂದ ದಂಧೆ ನಡೆಸುತ್ತಿದ್ದಾನೆ ಎಂದು ತಿಳಿದುಬಂದಿದೆ ಎಂದು ಎಂದು ಹಿರಿಯ ಪೊಲೀಸ್ ಅಧಿಕಾರಿ ನುಮಲ್ ಮಹತ್ತಾ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read