ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವುದನ್ನು ತಡೆಯಲು ಫ್ಯಾಕ್ಟ್ ಘಟಕ ಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಜಾಲತಾಣಗಳಲ್ಲಿನ ಸುಳ್ಳು ಸುದ್ದಿ ಪತ್ತೆ, ನಿಯಂತ್ರಣಕ್ಕೆ ಸತ್ಯ ತಪಾಸಣೆ ಘಟಕ ರಚನೆ ಮಾಡಲು ಮತ್ತು ಸುಳ್ಳು ಸುದ್ದಿ ಸೃಷ್ಟಿಸುವಂತಹ ಸಿಂಡಿಕೇಟ್ ಗಳಿಗೆ ಕಠಿಣ ಶಿಕ್ಷೆ ಬಿಡಿಸುವ ಕುರಿತು ಕಾನೂನು ರೂಪಿಸಲು ಸಿಎಂ ಅನುಮತಿ ನೀಡಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸೈಬರ್ ಸುರಕ್ಷತೆ ವಿಚಾರವಾಗಿ ನಡೆದ ಸಭೆಯಲ್ಲಿ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವುದು ಪ್ರಜಾಪ್ರಭುತ್ವಕ್ಕೆ ಬೆದರಿಕೆಯಾಗಿದ್ದು, ಇದರ ನಿಯಂತ್ರಣ ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ಸತ್ಯ ತಪಾಸಣೆ ಘಟಕ ಸ್ಥಾಪನೆ ಅಗತ್ಯವಾಗಿದ್ದು, ಇದಕ್ಕೆ ಎಲ್ಲಾ ನಿಯಮ ಮತ್ತು ಕಾನೂನು ರೂಪಿಸುವಂತೆ ಗೃಹ ಇಲಾಖೆ ಹಾಗು ಐಟಿಬಿಟಿ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿ @siddaramaiah ಅವರ ಅಧ್ಯಕ್ಷತೆಯಲ್ಲಿ ಇಂದು ಸೈಬರ್ ಸುರಕ್ಷತೆಗೆ ಸಂಬಂಧಿಸಿದಂತೆ ಸಭೆ ನಡೆಸಿ, ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ಗೃಹ ಸಚಿವರಾದ ಡಾ|| ಜಿ. ಪರಮೇಶ್ವರ್, ಸಚಿವರಾದ @krishnabgowda, @PriyankKharge, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮುಖ್ಯಮಂತ್ರಿಗಳ ಅಪರ… pic.twitter.com/yUzT4ZGWB7— CM of Karnataka (@CMofKarnataka) August 21, 2023