ಧರ್ಮಸ್ಥಳ : ಧರ್ಮಸ್ಥಳ ಕೇಸ್ ಗೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದ್ದು, ನಿನ್ನೆ 6 ನೇ ಪಾಯಿಂಟ್ ನಲ್ಲಿ ಸಿಕ್ಕಿದ್ದು ಪುರುಷನ ಪೂರ್ತಿ ಅಸ್ಥಿಪಂಜರ ಎಂಬ ಮಾಹಿತಿ ಲಭ್ಯವಾಗಿದೆ.
6 ನೇ ಪಾಯಿಂಟ್ ನಲ್ಲಿ ಸಿಕ್ಕ ಅಸ್ಥಿಪಂಜರದ ಮೂಳೆಗಳನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದು, ಎಫ್ ಎಸ್ ಎಲ್ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಹಾಗೂ ಸ್ಥಳದಲ್ಲಿ ಪುರುಷನ ಒಳ ಉಡುಪು ಕೂಡ ಪತ್ತೆಯಾಗಿದೆ.
ಧರ್ಮಸ್ಥಳದಲ್ಲಿ ನೂನಾರು ಶವಗಳನ್ನು ಹೂತಿಟ್ಟಿದ್ದಾಗಿ ತಪ್ಪೊಪ್ಪಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಯಿಂಟ್ 1ರಲ್ಲಿ ಸಿಕ್ಕಿದ್ದ ಪಾನ್ ಕಾರ್ಡ್ ಯಾರದ್ದು ಎಂಬುದು ಪತ್ತೆಯಾಗಿದೆ.ಧರ್ಮಸ್ಥಳದ ನೇತ್ರಾವತಿ ನದಿ ತೀರದಲ್ಲಿ ನೂರಾರು ಶವ ಹೂತಿಟ್ಟಿದ್ದಾಗಿ ದೂರುದಾರ ನೀಡಿರುವ ಮಾಹಿತಿ ಮೇರೆಗೆ ಆತ ತೋರಿಸಿದ ಜಾಗಗಳಲ್ಲಿ ಶೋಧಕಾರ್ಯನಡೆಸಲಾಗುತ್ತಿದೆ. ಶೋಧಕಾರ್ಯಾಚರಣೆ ವೇಳೆ ಪಾಯಿಂಟ್ 1ರಲ್ಲಿ ಸಿಕ್ಕಿರುವ ಪಾನ್ ಕಾರ್ಡ್ ಯಾರದ್ದು ಎಂಬುದು ಪತ್ತೆಯಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯ ವೀರಸಾಗರ ನಿವಾಸಿ ಸುರೇಶ್ ಅವರ ಪಾನ್ ಕಾರ್ಡ್ ಎಂದು ಗೊತ್ತಾಗಿದೆ. ಸುರೇಶ್ ಗಂಗಮರಿಯಪ್ಪ ಹಾಗೂ ಸಿದ್ದಲಕ್ಷ್ಮಮ್ಮ ಅವರ ಪುತ್ರ. ಮಾರ್ಚ್ ತಿಂಗಳಿನಲ್ಲಿ ಜಾಂಡೀಸ್ ನಿಂದ ಸುರೇಶ್ ಮೃತಪಟ್ಟಿದ್ದಾರೆ. ಎರಡು ವರ್ಷಗಳ ಹಿಂದೆ ವೀರಸಾಗರದ ಸುರೇಶ್ ಮನೆಬಿಟ್ಟು ಹೋಗಿದ್ದ. ಮಾರ್ಚ್ ನಲ್ಲಿ ಜಾಂಡೀಸ್ ನಿಂದ ಸಾವನ್ನಪ್ಪಿದ್ದ. ಕುಟುಂಬದವರೇ ಸೇರಿ ಮೃತದೇಹದ ಅಂತ್ಯಸಂಸ್ಕಾರ ನೆರವೇರಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.