Exit Poll effect: ಸಾರ್ವಕಾಲಿಕ ಏರಿಕೆ ಕಂಡ ಸೆನ್ಸೆಕ್ಸ್ – ನಿಫ್ಟಿ

ಈ ಬಾರಿಯ ಲೋಕಸಭಾ ಚುನಾವಣೆ ಏಳು ಹಂತಗಳಲ್ಲಿ ನಡೆದಿದ್ದು, ಮತದಾನ ಈಗಾಗಲೇ ಪೂರ್ಣಗೊಂಡಿದೆ. ಜೂನ್ 4ರ ನಾಳೆ ಮತ ಎಣಿಕೆ ಕಾರ್ಯ ನಡೆಯಲಿದ್ದು, ಫಲಿತಾಂಶ ಬಹುತೇಕ ಅಂದು ಸಂಜೆಯೇ ಹೊರಬೀಳಲಿದೆ.

ಇದರ ಮಧ್ಯೆ 7ನೇ ಹಂತದ ಮತದಾನ ಪೂರ್ಣಗೊಂಡ ದಿನವಾದ ಶನಿವಾರದಂದು ಮಾಧ್ಯಮಗಳು ಚುನಾವಣೋತ್ತರ ಸಮೀಕ್ಷೆ ಪ್ರಕಟಿಸಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಮೈತ್ರಿಕೂಟ ಭರ್ಜರಿ ಬಹುಮತದೊಂದಿಗೆ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ಹೇಳಲಾಗಿದೆ.

ಇದರ ಪರಿಣಾಮ ಷೇರು ಮಾರುಕಟ್ಟೆಯ ಮೇಲೆ ಆಗಿದ್ದು, ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸಾರ್ವಕಾಲಿಕ ಏರಿಕೆ ದಾಖಲಿಸಿವೆ. ಇಂದು ವಹಿವಾಟು ಆರಂಭವಾಗುತ್ತಲೇ ಮೂವತ್ತು ಷೇರುಗಳ ಸೆನ್ಸೆಕ್ಸ್ ಮತ್ತು 50 ಷೇರುಗಳ ನಿಫ್ಟಿಯ ಎಲ್ಲ ಷೇರುಗಳು ಗಳಿಕೆ ಕಂಡಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read