ಪ್ರಯಾಣಿಕರಿಗೆ ಗುಡ್ ನ್ಯೂಸ್: ಕಡಿಮೆ ದರದಲ್ಲಿ ನೀರು, ಆಹಾರ ಪೂರೈಕೆಗೆ ವಿಮಾನ ನಿಲ್ದಾಣಗಳಲ್ಲಿ ‘ಉಡಾನ್ ಯಾತ್ರಿ ಕೆಫೆ’ ಆರಂಭ

ನವದೆಹಲಿ: ವಿಮಾನ ನಿಲ್ದಾಣಗಳಲ್ಲಿನ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ನೀರಿನ ಬಾಟಲ್, ಕಾಫಿ, ಟೀ, ಊಟದ ದರ ಅತ್ಯಂತ ದುಬಾರಿಯಾಗಿದೆ ಎನ್ನುವ ಆರೋಪಗಳ ಹಿನ್ನೆಲೆಯಲ್ಲಿ ಅಗ್ಗದ ದರದಲ್ಲಿ ನೀರು, ಆಹಾರ ಪದಾರ್ಥ ವಿತರಿಸಲು ಉಡಾನ್ ಯಾತ್ರಿ ಕೆಫೆ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ.

ಭಾನುವಾರ ಕೊಲ್ಕತ್ತಾ ಏರ್ಪೋರ್ಟ್ ನಲ್ಲಿ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಿದ್ದು, ಈ ಯೋಜನೆ ಯಶಸ್ವಿಯದಲ್ಲಿ ದೇಶವ್ಯಾಪಿ ವಿಸ್ತರಿಸಲು ನಾಗರೀಕ ವಿಮಾನಯಾನ ಸಚಿವಾಲಯ ಕ್ರಮ ಕೈಗೊಂಡಿದೆ.

ಸಣ್ಣ ನೀರಿನ ಬಾಟಲ್ ಗೆ 100 ರೂಪಾಯಿ, ಕಾಫಿ, ಟೀ ಗೆ 200 ರಿಂದ 250 ರೂ.ಗಿಂತ ಹೆಚ್ಚಿನ ದರವನ್ನು ವಿಮಾನ ನಿಲ್ದಾಣದ ರೆಸ್ಟೋರೆಂಟ್ ಗಳು ವಿಧಿಸುತ್ತಿವೆ. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಂಸತ್ತಿನಲ್ಲಿಯೂ ಈ ಬಗ್ಗೆ ಪ್ರಸ್ತಾಪವಾಗಿತ್ತು. ಇದರ ಬೆನ್ನಲ್ಲೇ ವಿಮಾನಯಾನ ಸಚಿವಾಲಯ ಹೊಸ ಯೋಜನೆಗೆ ಚಾಲನೆ ನೀಡಿದೆ. ವಿಮಾನ ನಿಲ್ದಾಣಗಳಲ್ಲಿ ಕಡಿಮೆ ದರದಲ್ಲಿ ನೀರು, ಆಹಾರ ಪದಾರ್ಥ ಪೂರೈಸಲು ಉಡಾನ್ ಯಾತ್ರಿ ಕೆಫೆ ಯೋಜನೆಗೆ ಚಾಲನೆ ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read