ಅತಿಯಾದ ʼಬಾಯಾರಿಕೆʼ ಇರಬಹುದು ಈ ರೋಗಗಳ ಲಕ್ಷಣ

ದೇಹದಲ್ಲಿರುವ ನೀರು ಮೂತ್ರ ವಿಸರ್ಜನೆ, ಅತಿಸಾರ, ವಾಂತಿ ಮತ್ತು ಬೆವರಿನ ಮೂಲಕ ಹೊರ ಹೋಗುತ್ತದೆ. ದೇಹದಲ್ಲಿ ನೀರಿನಾಂಶ ಖಾಲಿಯಾದಾಗ ಅತಿಯಾಗಿ ಬಾಯಾರಿಕೆಯಾಗುತ್ತದೆ. ಈ ಅತಿಯಾದ ಬಾಯಾರಿಕೆ ಕೂಡ ಕೆಲವು ರೋಗಗಳ ಲಕ್ಷಣವಾಗಿದೆ. ಅದು ಯಾವೆಲ್ಲಾ ರೋಗಗಳು ಎಂಬುದನ್ನು ತಿಳಿದುಕೊಳ್ಳಿ.

*ಮಧುಮೇಹ ರೋಗದಿಂದ ಬಳಲುತ್ತಿರುವವರಲ್ಲಿ ಈ ಸಮಸ್ಯೆ ಕಂಡುಬರುತ್ತದೆ. ಸಕ್ಕರೆ ಮಟ್ಟ ಅಧಿಕವಾಗಿದ್ದಾಗ ಮೂತ್ರಪಿಂಡಗಳು ಸಕ್ಕರೆ ಮಟ್ಟವನ್ನು ನಿಭಾಯಿಸಲಾಗದೆ ಅದು ಮೂತ್ರದಲ್ಲಿ ಸೇರಿಕೊಂಡು ದೇಹದ ನೀರನ್ನು ಹೊರಹಾಕುತ್ತದೆ.

*ಅತಿಸಾರ, ಶಾಖ, ಜ್ವರದಿಂದ ದೇಹದಲ್ಲಿನ ನೀರಿನಾಂಶ ಕಡಿಮೆಯಾಗುತ್ತದೆ. ಇದರಿಂದ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಉಂಟಾಗಿ ಬಾಯಾರಿಕೆಯಾಗುತ್ತದೆ.

*ನೀವು ಅತಿಯಾದ ಚಿಂತೆ ಮಾಡುತ್ತಿದ್ದಾಗ ನಿಮ್ಮ ಲಾಲಾರಸ ನಷ್ಟವಾಗಿ ಇದರಿಂದ ಬಾಯಿ ಒಣಗಿದಂತೆ ಭಾಸವಾಗುತ್ತದೆ.

*ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರ ಪದಾರ್ಥಗಳನ್ನು ಸೇವಿಸಿದಾಗ ಜೀರ್ಣಕ್ರಿಯೆ ಸಮಸ್ಯೆ ಉಂಟಾಗುತ್ತದೆ. ಆ ವೇಳೆ ನಿಮಗೆ ಆಹಾರ ಜೀರ್ಣವಾಗಲು ದ್ರವ ಸಾಕಾಗದಿದ್ದಾಗ ಅತಿಯಾಗಿ ಬಾಯಾರಿಕೆ ಉಂಟಾಗುತ್ತದೆ.

*ದೇಹದಲ್ಲಿ ರಕ್ತಹೀನತೆ ಸಮಸ್ಯೆ ಇದ್ದಾಗ, ಕೆಂಪು ರಕ್ತದ ಕಣ ಕಡಿಮೆ ಇದ್ದಾಗ ಆರೋಗ್ಯ ಸಮಸ್ಯೆ ಎದುರಾಗಿ ನಿಮಗೆ ಅತಿಯಾಗಿ ಬಾಯಾರಿಕೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read