ಚಳಿಗಾಲದಲ್ಲಿ ಅತಿಯಾದ ಕಡಲೆಕಾಯಿ ಸೇವನೆ ತಂದೊಡ್ಡುತ್ತೆ ಈ ಸಮಸ್ಯೆ

ಚಳಿಗಾಲದಲ್ಲಿ ಹೆಚ್ಚಿನ ಜನರು ಕಡಲೆಕಾಯಿಯನ್ನು ಸೇವಿಸುತ್ತಾರೆ. ಇದು ದೇಹಕ್ಕೆ ಹಲವು ಪೋಷಕಾಂಶಗಳನ್ನು ಒದಗಿಸುತ್ತದೆ.

ಆದರೆ ಅತಿ ಹೆಚ್ಚು ಕಡಲೆಕಾಯಿ ಸೇವಿಸದಿರುವುದೆ ಒಳಿತು. ಯಾಕೆಂದರೆ ಇದರಿಂದ ಕೆಲವು ಆರೋಗ್ಯ ಸಮಸ್ಯೆಗಳು ಕಾಡುತ್ತವೆ.

1.ಪಿತ್ತಜನಕಾಂಗದ ಸಮಸ್ಯೆ: ಅತಿಯಾಗಿ ಕಡಲೆಕಾಯಿ ಸೇವಿಸಿದರೆ ಲಿವರ್ ದುರ್ಬಲಗೊಳ್ಳುತ್ತದೆ. ಕಡಲೆಕಾಯಿ ಸೇವನೆಯಿಂದ ದೇಹದಲ್ಲಿ ಉತ್ಪತ್ತಿಯಾಗುವ ಅಂಶ ಲಿವರ್ ನ ಕಾಯಿಲೆಗೆ ಕಾರಣವಾಗುತ್ತದೆ.

2.ಜೀರ್ಣಕ್ರಿಯೆ ಸಮಸ್ಯೆ: ಕಡಲೆಕಾಯಿಯಲ್ಲಿ ಅತಿ ಹೆಚ್ಚು ಪ್ರೋಟೀನ್ ಇದೆ. ಇದನ್ನು ತಿಂದ ನಂತರ ನಿಮ್ಮ ಹೊಟ್ಟೆ ತುಂಬಿರುತ್ತದೆ. ಅಲ್ಲದೇ ಕಡಲೆಕಾಯಿಯಲ್ಲಿರುವ ಪೋಷಕಾಂಶಗಳನ್ನು ಜೀರ್ಣಿಸಿಕೊಳ್ಳಲು ತುಂಬಾ ಹೊತ್ತು ಬೇಕಾಗುತ್ತದೆ. ಇದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ. ದೇಹದಲ್ಲಿ ನೋವು ಮತ್ತು ಊತಗಳು ಕಂಡು ಬರುತ್ತದೆ.

3. ಹೃದ್ರೋಗವನ್ನು ಹೆಚ್ಚಿಸುತ್ತದೆ: ಕಡಲೆಕಾಯಿಯಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳಿವೆ. ಇದು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಆದರೆ ದೇಹದಲ್ಲಿ ಹೆಚ್ಚಿನ ಪ್ರಮಾಣದ ಒಮೆಗಾ-3 ಕೊಬ್ಬಿನಾಮ್ಲಗಳು ಹೃದಯದ ಕಾಯಿಲೆಗೆ ಕಾರಣವಾಗುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read