ಮಾಸ್ಕೋ: ರಷ್ಯಾದ ಮಾಜಿ ಸಾರಿಗೆ ಸಚಿವ ರೋಮನ್ ಸ್ಟಾರೊವೊಯಿಟ್ ಅವರನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಜಾಗೊಳಿಸಿದ್ದಾರೆ. ಇದಾದ ಕೆಲವೇ ಗಂಟೆಗಳ ನಂತರ ಸೋಮವಾರ ಜುಲೈ 7 ರಂದು ರೋಮನ್ ಸ್ಟಾರೊವೊಯಿಟ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಂದು, ಮಾಸ್ಕೋದ ಒಡಿಂಟ್ಸೊವೊ ಜಿಲ್ಲೆಯಲ್ಲಿ. ರೋಮನ್ ವ್ಲಾಡಿಮಿರೊವಿಚ್ ಸ್ಟಾರೊವೊಯಿಟ್ ಅವರ ಕಾರ್ ನಲ್ಲಿ ಗುಂಡೇಟಿನ ಗಾಯಗಳೊಂದಿಗೆ ಪತ್ತೆಯಾಗಿದ್ದಾರೆ ಎಂದು ರಷ್ಯಾದ ತನಿಖಾ ಸಮಿತಿಯ ವಕ್ತಾರರು ರಾಜ್ಯ-ಸ್ವಾಮ್ಯದ TASS ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಪೊಲೀಸ್ ತನಿಖಾಧಿಕಾರಿಗಳು ಸಾವಿಗೆ ಕಾರಣವನ್ನು ತಿಳಿಯಲು ತನಿಖೆ ನಡೆಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನಿಖಾಧಿಕಾರಿಗಳು ಅವರ ಸಾವಿನ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಸ್ಟಾರೊವೊಯಿಟ್ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡುವುದನ್ನು ಘೋಷಿಸಿದ ಅಧ್ಯಕ್ಷ ಪುಟಿನ್ ಕಾರಣವನ್ನು ತಿಳಿಸಿಲ್ಲ. ಪುಟಿನ್ ಮರು ಚುನಾವಣೆಯ ನಂತರ 53 ವರ್ಷ ವಯಸ್ಸಿನ ಸ್ಟಾರೊವೊಯ್ಟ್ ಅವರನ್ನು ಮೇ 2024 ರಲ್ಲಿ ಸಾರಿಗೆ ಸಚಿವರನ್ನಾಗಿ ನೇಮಿಸಲಾಯಿತು. ಒಂದು ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಅವರು ಇದಕ್ಕೂ ಮೊದಲು ಅವರು 2018 ರಿಂದ 2024 ರವರೆಗೆ ನೈಋತ್ಯ ಕುರ್ಸ್ಕ್ ಪ್ರದೇಶದ ಗವರ್ನರ್ ಆಗಿದ್ದರು.