BIG NEWS : ಮಾಜಿ ಸಂಸದ ‘ಪ್ರಜ್ವಲ್ ರೇವಣ್ಣ’ಗೆ ಢವಢವ.! : ಇಂದು ಕೋರ್ಟ್’ ನಲ್ಲಿ ಅತ್ಯಾಚಾರ ಪ್ರಕರಣದ ತೀರ್ಪು ಪ್ರಕಟ

ಮಾಜಿ ಸಂಸದ ‘ಪ್ರಜ್ವಲ್ ರೇವಣ್ಣ’ಗೆ ಢವಢವ ಶುರುವಾಗಿದ್ದು, ಇಂದು ಕೋರ್ಟ್ ನಲ್ಲಿ ಅತ್ಯಾಚಾರ ಪ್ರಕರಣದ ತೀರ್ಪು ಪ್ರಕಟವಾಗಲಿದೆ.

ಹೌದು, ಮಾಜಿ ಸಂಸದ ‘ ಪ್ರಜ್ವಲ್ ರೇವಣ್ಣ’ ವಿರುದ್ಧದ ಅತ್ಯಾಚಾರ ಕೇಸ್ ಗೆ ಸಂಬಂಧಿಸಿದಂತೆ ಆಗಸ್ಟ್ 1 ಕ್ಕೆ ತೀರ್ಪು ಮುಂದೂಡಿಕೆಯಾಗಿತ್ತು. ಇಂದು ಕೋರ್ಟ್ ತೀರ್ಪು ಪ್ರಕಟಿಸಲಿದೆ. ಕೆಆರ್ ನಗರ ಮೂಲದ ಮನೆ ಕೆಲಸದ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ.

ಮೊನ್ನೆ ಏನಾಗಿತ್ತು..?

ಪ್ರಜ್ವಲ್ ರೇವಣ್ಣರನ್ನು ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಎರಡೂ ಕಡೆ ವಕೀಲರಿಂದ ಸ್ಪಷ್ಟನೆ ಕೇಳಿದ ಕೋರ್ಟ್ ಆಗಸ್ಟ್ 1 ಕ್ಕೆ ತೀರ್ಪು ಮುಂದೂಡಿತ್ತು. . ಸ್ಪಷ್ಟೀಕರಣ ಬೇಕಿದ್ದರಿಂದ ತೀರ್ಪು ಮುಂದೂಡಿಕೆಯಾಗಿದೆ ಎಂದು ಜಡ್ಜ್ ಹೇಳಿದ್ದರು.

ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಆರೋಪದಡಿ ಪ್ರಜ್ವಲ್ ರೇವಣ್ಣ ವಿರುದ್ಧ ನಾಲ್ಕು ಪ್ರಕರಣ ದಾಖಲಾಗಿವೆ. ಇವುಗಳಲ್ಲಿ ಸಿಐಡಿ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅತ್ಯಾಚಾರ ಪ್ರಕರಣ ಸಂಬಂಧ ಸಿಐಡಿ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು. ಪ್ರಜ್ವಲ್ ಪ್ರಕರಣದಲ್ಲಿ ಪ್ರಕಟವಾಗುತ್ತಿರುವ ಮೊದಲ ತೀರ್ಪು ಇದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read