ನರೇಶ್ ಕುಟುಂಬದ ಕುರಿತು ನಟಿ ಪವಿತ್ರಾ ಲೋಕೇಶ್ ಮಹತ್ವದ ಹೇಳಿಕೆ

ತೆಲುಗು ಸ್ಟಾರ್ ಜೋಡಿ ನರೇಶ್ ವಿಜಯ ಕೃಷ್ಣ ಮತ್ತು ಪವಿತ್ರಾ ಲೋಕೇಶ್ ಅವರ ಮದುವೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಭಾರೀ ಸುದ್ದಿಯಾಗುತ್ತಿದೆ.

ಇವರಿಬ್ಬರೂ ಈಗಾಗಲೇ ಮುಂಬರುವ ಚಿತ್ರ ಮಳ್ಳಿ ಪೆಳ್ಳಿ ಚಿತ್ರದಲ್ಲಿ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಇದೇ ಚಿತ್ರದ ಬಗ್ಗೆ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ನಟಿ ಪವಿತ್ರಾ ಲೋಕೇಶ್ ತಮ್ಮನ್ನು ನರೇಶ್ ಕುಟುಂಬಸ್ಥರು ಒಪ್ಪಿಕೊಂಡಿದ್ದಾರೆ, ನನ್ನನ್ನು ಅವರ ಕುಟುಂಬದಲ್ಲೊಬ್ಬಳು ಎಂದು ಪರಿಗಣಿಸಿದ್ದಾರೆ ಎಂದು ಹೇಳಿದ್ದಾರೆ.

ಪವಿತ್ರಾ ಅವರು ಈ ಹಿಂದೆ ನರೇಶ್ ಅವರ ದಿವಂಗತ ತಾಯಿ ವಿಜಯ ನಿರ್ಮಲಾ ಅವರನ್ನು ಭೇಟಿಯಾಗಿದ್ದನ್ನ ಬಹಿರಂಗಪಡಿಸಿದ್ದಾರೆ. ಮಹೇಶ್ ಬಾಬು ಮತ್ತು ನಮ್ರತಾ ಅವರನ್ನು ಭೇಟಿಯಾಗಿರುವುದಾಗಿಯೂ ಹೇಳಿದರು. ಎಲ್ಲರೂ ನನ್ನನ್ನು ಅವರ ಕುಟುಂಬದವರಲ್ಲಿ ಒಬ್ಬಳೆಂಬಂತೆ ಸ್ವಾಗತಿಸಿದರು. ನಮ್ಮ ನಿರ್ಧಾರಕ್ಕೆ ನಮ್ಮ ಕುಟುಂಬಗಳು ಬೆಂಬಲ ನೀಡಿವೆ ಎಂದು ಹೇಳಿದರು.

ನರೇಶ್ ಅವರ ಬಗ್ಗೆ ನಿಮಗೆ ಏನು ಇಷ್ಟ ಎಂದು ಕೇಳಿದಾಗ, ನನ್ನನ್ನು ಅವರು ನಡೆಸಿಕೊಳ್ಳುವ ರೀತಿ ನನಗೆ ಇಷ್ಟವಾಯಿತು ಎಂದು ಪವಿತ್ರಾ ಲೋಕೇಶ್ ಹಂಚಿಕೊಂಡರು.

ಮಳ್ಳಿ ಪೆಳ್ಳಿ ಚಿತ್ರವನ್ನು ನಿಮ್ಮ ಜೀವನದ ಬಯೋಪಿಕ್ ಎಂದು ಕರೆಯಬಹುದೇ ಎಂದು ಕೇಳಿದಾಗ, ಈ ಮಾತು ತುಂಬಾ ದೊಡ್ಡದು ಮತ್ತು ಚಿತ್ರದ ಕಥಾವಸ್ತುವು ಅನೇಕ ನಿಜ ಜೀವನದ ಜೋಡಿಗಳನ್ನು ನೆನಪಿಸುತ್ತದೆ ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read