ಅಂಬಾನಿ ಕುಟುಂಬದ ಪ್ರತಿ ಸದಸ್ಯರ ಬಳಿಯೂ ಇದೆ ರಿಲಯನ್ಸ್‌ ಷೇರು

ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಪಕ್ಕಾ ಫ್ಯಾಮಿಲಿ ಮ್ಯಾನ್‌. ಯಾವಾಗಲೂ ತಮ್ಮ ಕುಟುಂಬದ ಬಗ್ಗೆ ಕಾಳಜಿ ವಹಿಸ್ತಾರೆ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ, ತಮ್ಮ ತಂದೆ ಧೀರೂಭಾಯಿ ಅಂಬಾನಿಯಂತೆ ನಿರಂತರವಾಗಿ ಕಂಪನಿಯನ್ನು ಮಾತ್ರವಲ್ಲದೆ ಕುಟುಂಬವನ್ನೂ ಮುನ್ನಡೆಸಿದ್ದಾರೆ. ಈ ಕಾರಣಕ್ಕಾಗಿಯೇ ಅವರು ತಮ್ಮ ಪುತ್ರರಿಗೆ ಮಾತ್ರವಲ್ಲದೆ, ಪತ್ನಿ ನೀತಾ ಅಂಬಾನಿ ಮತ್ತು ಮಗಳು ಇಶಾಗೂ ವ್ಯಾಪಾರದಲ್ಲಿ ಪ್ರಮುಖ ಜವಾಬ್ದಾರಿಗಳನ್ನು ವಹಿಸಿದ್ದಾರೆ.

ಅಂಬಾನಿ ಕುಟುಂಬದ ಎಲ್ಲಾ ಸದಸ್ಯರು ರಿಲಯನ್ಸ್ ಇಂಡಸ್ಟ್ರೀಸ್‌ನ ಭಾಗವಾಗಿದ್ದಾರೆ ಮತ್ತು ತಮ್ಮ ಜವಾಬ್ಧಾರಿಗಳನ್ನು ಉತ್ತಮವಾಗಿ ನಿಭಾಯಿಸುತ್ತಿದ್ದಾರೆ. ಮುಖೇಶ್‌ ಅಂಬಾನಿ ಅವರ ತಾಯಿಯಿಂದ ಹಿಡಿದು ಪ್ರತಿಯೊಬ್ಬರೂ ರಿಲಯನ್ಸ್‌ನ ಷೇರುಗಳನ್ನು ಹೊಂದಿದ್ದಾರೆ. ಕೋಕಿಲಾಬೆನ್ ಅಂಬಾನಿ ಅವರ ಬಳಿ 1,57,41,322 ಷೇರುಗಳಿವೆ. ಅವರು ಕಂಪನಿಯಲ್ಲಿ 0.24 ರಷ್ಟು ಪಾಲನ್ನು ಹೊಂದಿದ್ದಾರೆ.

ಧೀರೂಭಾಯಿ ಅಂಬಾನಿ ಅವರ ನಿಧನದ ನಂತರ ಕೋಕಿಲಾಬೆನ್ ತಮ್ಮ ಇಬ್ಬರು ಪುತ್ರರಾದ ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ನಡುವೆ ವ್ಯವಹಾರವನ್ನು ವಿಭಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದರೆ ಕೋಕಿಲಾಬೆನ್‌ ರಿಲಯನ್ಸ್ ಇಂಡಸ್ಟ್ರೀಸ್‌ನ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ. ಆದಾಗ್ಯೂ ಅವರ ಪ್ರಭಾವ ಮತ್ತು ಮಾರ್ಗದರ್ಶನ ಕುಟುಂಬದ ಅವಿಭಾಜ್ಯ ಅಂಗವಾಗಿದೆ.

ಮುಖೇಶ್ ಅಂಬಾನಿ ಅವರ ಮಕ್ಕಳಾದ ಆಕಾಶ್ ಅಂಬಾನಿ, ಇಶಾ ಅಂಬಾನಿ ಮತ್ತು ಅನಂತ್ ಅಂಬಾನಿ 80,52,021 ಷೇರುಗಳನ್ನು ಹೊಂದಿದ್ದಾರೆ. ಕಂಪನಿಯಲ್ಲಿ ಇವರ ಲಾಲು ಶೇ.0.12 ರಷ್ಟಿದೆ. 2022ರಲ್ಲಿ ಮುಖೇಶ್ ಅಂಬಾನಿ ಅವರು ತಮ್ಮ ಮಗಳು ಇಶಾ ಅಂಬಾನಿಗೆ ರಿಲಯನ್ಸ್ ರಿಟೇಲ್‌ನ ನಾಯಕತ್ವವನ್ನು ಹಸ್ತಾಂತರಿಸಿದ್ದರು.

ಹಿರಿಯ ಮಗ ಆಕಾಶ್ ಅಂಬಾನಿ ಅವರನ್ನು ಅದೇ ವರ್ಷ ರಿಲಯನ್ಸ್ ಜಿಯೋ ಅಧ್ಯಕ್ಷರನ್ನಾಗಿ ಮಾಡಲಾಯ್ತು. ಕಂಪನಿಯ ಇಂಧನ ವ್ಯವಹಾರವನ್ನು ಅನಂತ್ ಅಂಬಾನಿಗೆ ಹಸ್ತಾಂತರಿಸಿದ್ರು. ಮುಖೇಶ್‌ ಅಂಬಾನಿ ಅವರ ಮೂವರು ಮಕ್ಕಳು ಪರಸ್ಪರ ಹೊಂದಾಣಿಕೆಯಿಂದ ಉತ್ತಮ ಬಾಂಧವ್ಯದೊಂದಿಗೆ ವ್ಯವಹಾರವನ್ನು ಮುನ್ನಡೆಸಿಕೊಂಡು ಹೋಗ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read