ಗಾಳಿಪಟದ ದಾರಕ್ಕೆ ಸಿಲುಕಿದ್ದ ಪಕ್ಷಿಯನ್ನು ರಕ್ಷಿಸಿದ ಸಂಚಾರಿ ಪೇದೆ; ಹೃದಯಸ್ಪರ್ಶಿ ವಿಡಿಯೋ ವೈರಲ್

ಗಾಳಿಪಟಗಳ ದಾರ ಬಹಳಷ್ಟು ಬಾರಿಗೆ ವಿದ್ಯುತ್‌ ಕಂಬಗಳು, ತಂತಿಗಳು, ಮರಗಳು ಹಾಗೂ ಪಕ್ಷಿಗಳಿಗೆ ಸಿಲುಕಿಕೊಳ್ಳುತ್ತಲೇ ಇರುತ್ತವೆ.

ಜೈಪುರದಲ್ಲಿ ಹೀಗೊಂದು ಗಾಳಿಪಟದ ದಾರವು ಪಕ್ಷಿಗೆ ಸಿಕ್ಕಿಕೊಂಡಿದ್ದು, ಅದೇ ವೇಳೆ ಸ್ಥಳದಲ್ಲಿದ್ದ ಪೊಲೀಸ್ ಪೇದೆಯೊಬ್ಬರು ಕೂಡಲೇ ಆ ಪಕ್ಷಿಯನ್ನು ದಾರದ ಬಂಧನದಿಂದ ಬಿಡಿಸಿದ ಘಟನೆ ನೆಟ್ಟಿಗರ ಹೃದಯ ಗೆಲ್ಲುತ್ತಿದೆ.

ಬ್ಯುಸಿ ರಸ್ತೆಯೊಂದರಲ್ಲಿ ಕರ್ತವ್ಯದಲ್ಲಿದ್ದ ಪ್ರೇಮ್ ಸಿಂಗ್ ದಾರಕ್ಕೆ ಸಿಲುಕಿ ಪರದಾಡುತ್ತಿದ್ದ ಪಕ್ಷಿಯನ್ನು ನೋಡಿದ್ದಾರೆ. ಕೂಡಲೇ ಅಲ್ಲಿ ಹೋಗುತ್ತಿದ್ದ ಬಸ್ಸನ್ನು ನಿಲ್ಲಿಸಲು ಹೇಳಿದ ಪ್ರೇಮ್‌ ಸಿಂಗ್, ಬಸ್ಸಿನ ಮೇಲೇರಿ ಪಕ್ಷಿಯನ್ನು ಹಿಡಿದು, ದಾರಿಹೋಕನೊಬ್ಬನ ನೆರವಿನಿಂದ ಅದನ್ನು ದಾರದಿಂದ ಬಿಡಿಸಿದ್ದಾರೆ.

ಪೊಲೀಸಪ್ಪನ ಈ ಹೃಯದವಂತಿಕೆಯ ಕೆಲಸವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದ್ದು, ಉದಯ್ಪುರ ರೇಂಜ್‌ನ ಐಜಿಪಿ ಅಜಯ್‌ ಪಾಲ್ ಲಂಬಾ ಜನವರಿ 18ರಂದು ಫೇಸ್ಬುಕ್‌ನಲ್ಲಿ ಶೇರ್‌ ಮಾಡಿದ್ದರು. ಈ ವಿಡಿಯೋಗೆ 12,000ಕ್ಕೂ ಹೆಚ್ಚಿನ ಲೈಕ್ಸ್‌ಗಳು ಸಿಕ್ಕಿವೆ.

ಇದೇ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿರುವ ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು, “ಪ್ರತಿಯೊಂದು ಜೀವಕ್ಕೂ ಬೆಲೆ ಇದೆ. ಸಂಚಾರಿ ಪೇದೆ ಪ್ರೇಮ್‌ ಸಿಂಗ್‌ರ ಈ ಹೃದಯಸ್ಪರ್ಶಿ ಕೆಲಸಕ್ಕೆ ನನ್ನದೊಂದು ಸಲಾಂ,” ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.

https://www.youtube.com/watch?v=nmEox_nMKk4&feature=youtu.be

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read