ರೇಶ್ಮೆ ವಸ್ತ್ರಗಳು ಯಾರಿಗೆ ತಾನೇ ಇಷ್ಟವಾಗೋದಿಲ್ಲ ? ಚರ್ಮ-ಸ್ನೇಹಿ ಮಾತ್ರವಲ್ಲದೇ ಸುಂದರವಾದ ಲುಕ್ ಸಹ ಕೊಡುವ ರೇಶ್ಮೆಯಿಂದ ಮಾಡಿದ ಬಟ್ಟೆಗಳು ಎಲ್ಲೆಲ್ಲೂ ಭಾರೀ ಬೇಡಿಕೆಯಲ್ಲಿರುವುದು ಸಹಜವೇ.
ಆದರೆ ಸ್ವಾಭಾವಿಕ ರೇಶ್ಮೆಯನ್ನು ಮಾಡುವ ಬಗೆ ನಿಮಗೆ ಗೊತ್ತೇ ? ರೇಶ್ಮೆ ಉತ್ಪಾದನೆಯಲ್ಲಿ ಅನೇಕ ಹಂತಗಳಿವೆ.
ರೇಶ್ಮೆ ಹುಳುಗಳ ಸಾಕಾಣಿಕೆ, ಗೂಡು ಕಟ್ಟಿಸುವಿಕೆ, ಅವುಗಳನ್ನು ಪರಿಷ್ಕರಿಸಿ ಶುದ್ಧಗೊಳಿಸುವುದು, ನೂಲುವಿಕೆ, ನೇಯುವಿಕೆ ಹಾಗೂ ಅಂತಿಮ ಹಂತದ ಸಿದ್ಧತೆಗಳು ಸೇರಿದಂತೆ ಬಹಳ ನಾಜೂಕಾದ ಪ್ರಕ್ರಿಯೆಗಳ ಅಂತಿಮ ಫಲಿತಾಂಶವಾಗಿದೆ ರೇಶ್ಮೆ.
ಇನ್‌ಸ್ಟಾಗ್ರಾಂನ ’ಫುಡಿವುಡಿ67’ ಹೆಸರಿನ ಪ್ರೊಫೈಲ್ ಒಂದರಲ್ಲಿ ರೇಶ್ಮೆ ತಯಾರಿಕೆಯ ವಿವಿಧ ಹಂತಗಳನ್ನು ತೋರಲಾಗಿದೆ.
“ಓ ಮೈ ಗಾಡ್, ಇದು ಅದ್ಭುತ,” ಎಂದು ನೆಟ್ಟಿಗರೊಬ್ಬರು ಪೋಸ್ಟ್ ಮಾಡಿದ್ದಾರೆ.
https://www.youtube.com/watch?v=FnUSRI-cs5I