‘ಹೇಡಿಯಂತೆ ದೂರ ಸರಿಯಲ್ಲ, ದರ್ಶನ್ ಬಿಟ್ಟುಕೊಡುವ ಮಾತೇ ಇಲ್ಲ’ : ನಟಿ ಭಾವನಾ

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಅವರ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. ದರ್ಶನ್ ಬಂಧನ ಹಾಗೂ ಕೊಲೆ ಪ್ರಕರಣದ ಬಗ್ಗೆ ಕೆಲವೇ ಕೆಲವು ನಟ, ನಟಿಯರು ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ನಟಿ ಭಾವನಾ  ದರ್ಶನ್ ಬಂಧನದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸಂದರ್ಶನವೊಂದರಲ್ಲಿ  ದರ್ಶನ್ ಪರ ಬ್ಯಾಟ್ ಮಾಡಿದ ನಟಿ ಭಾವನಾ , “ನಾನು ದರ್ಶನ್ ಪರವಾಗಿ ನಿಲ್ಲುತ್ತೇನೆ. ಇದನ್ನು ಹೇಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ, ಇದು ಸರಿಯೋ ತಪ್ಪೋ ಎಂದು ನಾನು ಹೇಳುತ್ತಿಲ್ಲ . ನಾನು ವೈಯಕ್ತಿಕವಾಗಿ ಕಲೆ ಮತ್ತು ಕಲಾವಿದರ ಪರವಾಗಿ ನಿಲ್ಲುತ್ತೇನೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ. ಈಗ ಒಬ್ಬರು ತಪ್ಪಿತಸ್ಥ ಸ್ಥಾನದಲ್ಲಿ ನಿಂತಿದ್ದಾರೆ. ದರ್ಶನ್ ಅವರನ್ನು ಕೈಬಿಡುವ ಹೇಡಿತನ ನನಗಿಲ್ಲ ಎಂದರು.

ಅಲ್ಲಿ ಏನು ಘಟನೆ ನಡೆದಿದೆಯೋ ಅದರ ಕುರಿತು ನನ್ನ ನಿಲುವು ಬೇರೆ ಇರಬಹುದು. ಆದರೆ ದರ್ಶನ್ ವಿಷಯದಲ್ಲಿ ನನ್ನ ನಿಲುವು ಅಚಲ. ಈಗಲೂ ನಾನು ಅವರ ಬೆಂಬಲಕ್ಕೆ ನಿಲ್ಲುತ್ತೇನೆ, ನಾನು ದರ್ಶನ್ ಅವರನ್ನು ಕಲಾವಿದನಾಗಿ ಸ್ವೀಕರಿಸಿದ್ದೇನ. . “ನಾನು ದರ್ಶನ್ ಬೆಂಬಲಕ್ಕೆ ನಿಲ್ಲುತ್ತೇನೆ. ಇದನ್ನು ಹೇಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ರೇಣುಕಸ್ವಾಮಿ ಅವರ ಕುಟುಂಬಕ್ಕೆ ನನ್ನ ಸಂತಾಪ ಸೂಚಿಸುತ್ತೇನೆ ಎಂದು ನಟಿ ಭಾವನಾ ದಿಟ್ಟ ಮಾತುಗಳನ್ನಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read