ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ -ಇಪಿಎಫ್ಒ ಟ್ರಸ್ಟಿಗಳ ಕೇಂದ್ರೀಯ ಮಂಡಳಿ ಸಭೆ ಶನಿವಾರ ನಡೆಯಲಿದ್ದು, ಪಿಎಫ್ ಬಡ್ಡಿ ದರ ಶೇಕಡ 8 ರಷ್ಟು ನಿಗದಿಗೆ ಶಿಫಾರಸು ಮಾಡುವ ಸಾಧ್ಯತೆ ಇದೆ.
2023 ರಲ್ಲಿ ಶೇಕಡ 8.15 ರಷ್ಟು, 2022ರಲ್ಲಿ ಶೇಕಡ 8.1 ರಷ್ಟು ಬಡ್ಡಿ ದರವನ್ನು ಪಿಎಫ್ ಚೆಂದದಾರರ ಖಾತೆಗೆ ಜಮಾ ಮಾಡಲಾಗಿತ್ತು. ಷೇರುಗಳಲ್ಲಿ ಹೂಡಿಕೆ ಪ್ರಮಾಣ ಈಗಿನ ಶೇಕಡ 10 ರಿಂದ ಶೇಕಡ 15ರಷ್ಟು ಹೆಚ್ಚಳ ಮಾಡಲು ಇಪಿಎಫ್ಒ, ಸಿಬಿಟಿಯ ಅನುಮತಿ ಕೋರುವ ಸಂಭವ ಇದೆ. ಚುನಾವಣೆ ವರ್ಷ ಆಗಿರುವುದರಿಂದ ಹೂಡಿಕೆಗಳ ಮೇಲೆ ಹೆಚ್ಚಿನ ಲಾಭ ಖಾತರಿಪಡಿಸುವುದು ಸರ್ಕಾರದ ಉದ್ದೇಶವಾಗಿದ್ದು, ಶನಿವಾರ ನಡೆಯಲಿರುವ ಸಭೆಯಲ್ಲಿ ಇಪಿಎಫ್ಒ ಶೇಕಡ 8 ರಷ್ಟು ಬಡ್ಡಿದರಕ್ಕೆ ಶಿಫಾರಸು ಮಾಡುವ ಸಾಧ್ಯತೆ ಇದೆ.