ಕಾರ್ಮಿಕರಿಗೆ ಇಪಿಎಫ್ಒ ಗುಡ್ ನ್ಯೂಸ್: ಅಧಿಕ ಪಿಂಚಣಿ ಆಯ್ಕೆ ಗಡುವು ಮೇ 3 ರವರೆಗೆ ವಿಸ್ತರಣೆ

ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ -ಇಪಿಎಫ್ಒ ಕಾರ್ಮಿಕರಿಗೆ ಹೆಚ್ಚಿನ ಪಿಂಚಣಿ ಆಯ್ಕೆ ಗಡುವು ವಿಸ್ತರಿಸಿದೆ. ಚಂದಾದಾರರಿಗೆ ಅಧಿಕ ಪಿಂಚಣಿ ಆಯ್ಕೆ ನೀಡಲಾಗಿದ್ದ ಗಡುವನ್ನು ಮೇ 3ರವರೆಗೆ ವಿಸ್ತರಿಸಲಾಗಿದ್ದು, ಅರ್ಹ ಚಂದಾದಾರರು ಮತ್ತು ಉದ್ಯೋಗದಾತರು ಜಂಟಿಯಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಇದಕ್ಕಾಗಿ ಮಾರ್ಚ್ 3 ಕೊನೆಯ ದಿನ ನಿಗದಿಪಡಿಸಿ ಕಳೆದ ನವೆಂಬರ್ 4ರಂದು ಸುಪ್ರೀಂ ಕೋರ್ಟ್ ಗಡುವ ನಿಗದಿ ಮಾಡಿದ್ದು, ಹೀಗಾಗಿ ಇಪಿಎಫ್ ಕಳೆದ ಬಾರಿ ಅಧಿಕ ಪಿಂಚಣಿ ಆಯ್ಕೆಗೆ ಸಂಬಂಧಿಸಿದ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಿದ್ದು, 2014ರ ಸೆಪ್ಟೆಂಬರ್ ನಲ್ಲಿ ಇಪಿಎಸ್ ಕಾಯ್ದೆಗೆ ಮಾಡಿರುವ ತಿದ್ದುಪಡಿಯ ಪ್ರಕಾರ ಪಿಂಚಣಿಗೆ ಅರ್ಹವಾಗುವ ಗರಿಷ್ಠ ಮೊತ್ತ ವೇತನವನ್ನು 6500 ರೂ.ನಿಂದ 15000 ರೂ.ಗೆ ಹೆಚ್ಚಳ ಮಾಡಲಾಗಿದೆ. ಉದ್ಯೋಗದಾತರ ವಂತಿಗೆಯಲ್ಲಿ ಶೇಕಡ 8.33 ಪಿಂಚಣಿ ಕಾರ್ಪಸ್ ನಿಧಿಗೆ ವರ್ಗಾಯಿಸಬೇಕು ಎಂದು ಹೇಳಲಾಗಿದೆ.

ಆಯ್ಕೆಗೆ ನೀಡಿದ ಗಡುವಿನ ಬಗ್ಗೆ ಮಾಹಿತಿ ಕೊರತೆಯಿಂದ ಅನೇಕ ಕಾರ್ಮಿಕರ ಹೊಸ ಯೋಜನೆಗೆ ಸೇರ್ಪಡೆಯಾಗಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಗಡುವು ವಿಸ್ತರಿಸಬೇಕೆಂದು ಸುಪ್ರೀಂಕೋರ್ಟ್ ಗೆ 54 ಅರ್ಜಿಗಳು ಸಲ್ಲಿಕೆಯಾಗಿದ್ದು, ಕಳೆದ ನವೆಂಬರ್ ನಲ್ಲಿ 4 ತಿಂಗಳ ಕಾಲ ವಿಸ್ತರಿಸಲಾಗಿತ್ತು. ಮಾರ್ಚ್ 3ರ ಗಡುವು ನೀಡಲಾಗಿತ್ತು. ಇದನ್ನು ಇಪಿಎಫ್ ಮೇ 3ರವರೆಗೆ ವಿಸ್ತರಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read