ವರ್ಕ್ ಫ್ರಂ ಥಿಯೇಟರ್…! ‘ಜವಾನ್’ ನೋಡುತ್ತಲೇ ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡಿದ ಶಾರುಖ್ ಅಭಿಮಾನಿ

ಶಾರುಖ್ ಅಭಿನಯದ ‘ಜವಾನ್’ ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡ್ತಿದ್ದಾರೆ.

ಹೀಗೆ ಶಾರುಖ್ ಅಭಿಮಾನಿಯೊಬ್ಬರಿಗೆ ಸಿನಿಮಾ ನೋಡಲು ರಜೆ ಸಿಕ್ಕಿಲ್ಲ. ಹೀಗಾಗಿ ಥಿಯೇಟರ್ ನಲ್ಲಿ ಸಿನಿಮಾ ವೀಕ್ಷಿಸುತ್ತಲೇ ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡಿದ್ದಾರೆ.

ವರ್ಕ್ ಫ್ರಂ ಹೋಂ ಬಗ್ಗೆ ಕೇಳಿದ್ದವರೀಗ ವರ್ಕ್ ಫ್ರಂ ಥಿಯೇಟರ್ ಎಂದು ಮಾತಾಡಿಕೊಳ್ಳುವಂತಾಗಿದೆ. ಈ ದೃಶ್ಯವೀಗ ‘ಜವಾನ್’ ಜ್ವರ ಇಡೀ ರಾಷ್ಟ್ರವನ್ನು ಆವರಿಸಿರುವುದನ್ನು ತೋರಿಸಿದೆ.

ಟ್ವಿಟರ್ ಬಳಕೆದಾರರೊಬ್ಬರು ಈ ಫೋಟೋ ಹಂಚಿಕೊಂಡಿದ್ದಾರೆ. ಚಿತ್ರಕ್ಕೆ ತಮಾಷೆಯ ಶೀರ್ಷಿಕೆ ನೀಡಿದ್ದಾರೆ, “ಜವಾನ್ ಮೊದಲ ದಿನ ಮುಖ್ಯ. ಆದರೆ, ಜೀವನವೂ ಮುಖ್ಯ. ಪೀಕ್ಸ್ ಬೆಂಗಳೂರು. ಬೆಂಗಳೂರು INOX ನಲ್ಲಿ ವೀಕ್ಷಿಸಲಾಗಿದೆ. ಈ ಚಿತ್ರವನ್ನು ತೆಗೆದುಕೊಳ್ಳುವಲ್ಲಿ ಯಾವುದೇ ಇಮೇಲ್‌ ಗಳು ಅಥವಾ ಟೀಂಗಳ ಸೆಷನ್‌ ಗಳಿಗೆ ಹಾನಿಯಾಗಿಲ್ಲ. ಎಂದು ಪೋಸ್ಟ್ ಮಾಡಿದ್ದಾರೆ.

ಬಳಕೆದಾರರು ‘X’ ನಲ್ಲಿ ಪೋಸ್ಟ್ ಮಾಡಿದ ಚಿತ್ರದಲ್ಲಿ, ಅಭಿಮಾನಿ ಲ್ಯಾಪ್‌ಟಾಪ್ ತೆರೆದಿರುವಂತೆ ಬಳಕೆದಾರರ ಮುಂದೆ ಕುಳಿತಿರುವ ಚಲನಚಿತ್ರ ಪ್ರೇಕ್ಷಕರನ್ನು ಗುರುತಿಸಬಹುದು. ಬೆಂಗಳೂರು ಇಂತಹ ಘಟನೆಗೆ ಸಾಕ್ಷಿಯಾಗಿದೆ. ಶಾರುಖ್ ಸಿನಿಮಾ ಜೊತೆಗೆ ಕೆಲಸವೂ ಮುಖ್ಯ ಎಂದೆಲ್ಲಾ ಚರ್ಚೆಯಾಗಿದೆ.

https://twitter.com/neelangana/status/1700198414699606189

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read