
ಸುದೀಪ್ ಅವರು ಬಿಜೆಪಿ ಪ್ರಚಾರದ ಭಾಗವಾಗಿದ್ದರೂ, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ದೂರವಿರುತ್ತಾರೆ. ಅವರ ಈ ನಿರ್ಧಾರ ನಟ ಪ್ರಕಾಶ್ ರಾಜ್ ಗೆ ನೋವುಂಟು ಮಾಡಿದೆ.
ಇದು ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ನನ್ನ ಜೀವನದುದ್ದಕ್ಕೂ ನನ್ನನ್ನು ಬೆಂಬಲಿಸಿದ ಅನೇಕ ಜನರಿದ್ದಾರೆ ಮತ್ತು ಅವರಲ್ಲಿ ಸಿಎಂ ಬೊಮ್ಮಾಯಿ ಒಬ್ಬರು. ನಾನು ಇಂದು ಅವರ ಸಲುವಾಗಿ ಇಲ್ಲಿದ್ದೇನೆ. ಅವರ ಸಲುವಾಗಿ ಬಿಜೆಪಿ ಪರ ಪ್ರಚಾರ ಮಾಡಲು ಬಂದಿದ್ದೇನೆ ಎಂದು ಸುದೀಪ್ ಹೇಳಿದ್ದರು.
ನಟ ಕಿಚ್ಚ ಸುದೀಪ್ ಬಿಜೆಪಿಗೆ ಬೆಂಬಲ ನೀಡುವುದಾಗಿ ನೀಡಿದ ಹೇಳಿಕೆಯಿಂದ ಆಘಾತವಾಗಿದೆ. ಅವರ ಹೇಳಿಕೆ ನೋವು ತಂದಿದೆ ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸುದೀಪ್ ಅವರು ಬಿಜೆಪಿಗೆ ಬೆಂಬಲ ನೀಡುತ್ತಿರುವ ಕುರಿತ ಹೇಳಿಕೆಯಿಂದ ನನಗೆ ಆಘಾತವಾಗಿದೆ ಮತ್ತು ನೋವಾಗಿದೆ ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಪ್ರಕಾಶ್ ರಾಜ್ ಅವರು ಸುದೀಪ್ ಬಿಜೆಪಿ ಸೇರುವ ವಿಚಾರದ ಬಗ್ಗೆ ಟ್ವೀಟ್ ಮಾಡಿ, ಇದು ಕರ್ನಾಟಕದಲ್ಲಿ ಹತಾಶ, ಸೋತ ಬಿಜೆಪಿಯಿಂದ ಹರಡಿದ ಸುಳ್ಳು ಸುದ್ದಿ ಎಂದು ನಾನು ಬಲವಾಗಿ ನಂಬುತ್ತೇನೆ. ಸುದೀಪ್ ಹೆಚ್ಚು ಸಂವೇದನಾಶೀಲ ನಾಗರಿಕನಾಗಿದ್ದಾರೆ ಎಂದು ಹೇಳಿದ್ದರು. ಆದರೆ, ಸುದೀಪ್ ಬಿಜೆಪಿ ಸೇರಿಲ್ಲ. ಪ್ರಚಾರ ನಡೆಸಲಿದ್ದಾರೆ.