‘ಬೇಸಿಗೆ’ಯಲ್ಲಿ ಹೀಗಿರಲಿ ಸಂಗಾತಿ ಜೊತೆ ಎಂಜಾಯ್ಮೆಂಟ್

ಕಾಲ ಯಾವುದೇ ಇರಲಿ ಸಂಗಾತಿಗೆ ಸಮಯ ನೀಡೋದು ಬಹಳ ಮುಖ್ಯ. ಪ್ರತಿಯೊಂದು ಸಂಬಂಧಕ್ಕೂ ಸಮಯ ನೀಡಬೇಕು. ಬೇಸಿಗೆಯಲ್ಲಿ ಬಿಸಿಲ ಧಗೆಗೆ ಹೆದರಿ ಅನೇಕರು ಸಂಗಾತಿ ಜೊತೆ ಡೇಟ್ ಗೆ ಹೋಗಲು ಬಯಸೋದಿಲ್ಲ. ಬಿಸಿಲ ಕಿರಿಕಿರಿ ದಂಪತಿ ಮಧ್ಯೆ ಅಂತರ ಹೆಚ್ಚಿಸುತ್ತದೆ. ಕೆಲ ಟಿಪ್ಸ್ ಅನುಸರಿಸಿದ್ರೆ ಬೇಸಿಗೆಯಲ್ಲೂ ಸಂಗಾತಿ ಜೊತೆ  ಎಂಜಾಯ್ ಮಾಡಬಹುದು.

ಅಮ್ಯೂಜ್ಮೆಂಟ್ ಪಾರ್ಕ್ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ನೀವೂ ಸಂಗಾತಿ ಜೊತೆ ಅಮ್ಯೂಜ್ಮೆಂಟ್ ಪಾರ್ಕ್ ಗೆ ಹೋಗಿ ಆಟಗಳನ್ನು ಆಡಿ ಸಮಯ ಕಳೆಯಿರಿ.

ಯಾವುದಾದ್ರೂ ಒಳ್ಳೆ ಜಾಗಕ್ಕೆ ಪಿಕ್ನಿಕ್ ಗೆ ಹೋಗಿ ಬನ್ನಿ. ತಿಂಡಿ, ಆಟದ ಸಾಮಾನುಗಳನ್ನು ತೆಗೆದುಕೊಂಡು ಹೋಗಿ ಅಲ್ಲಿ ಒಟ್ಟಿಗೆ ಕಾಲ ಕಳೆಯಬಹುದು.

ಯಾವುದಾದ್ರೂ ಸ್ವಿಮ್ಮಿಂಗ್ ಫೂಲ್ ಅಥವಾ ನದಿ, ಕೆರೆಯಿದ್ದರೆ ಅಲ್ಲಿಗೆ ಹೋಗಿ ಒಟ್ಟಿಗೆ ಸ್ವಿಮ್ ಮಾಡಿ, ಡ್ರಿಂಕ್ ಮಾಡಿ ಎಂಜಾಯ್ ಮಾಡಬಹುದು.

ನಗರದಲ್ಲಿ ಪ್ರತಿದಿನ ಒಂದಲ್ಲ ಒಂದು ಕಾರ್ಯಕ್ರಮ ನಡೆಯುತ್ತಿರುತ್ತದೆ. ಅಲ್ಲಿಗೆ ನಿಮ್ಮ ಸಂಗಾತಿ ಜೊತೆ ಹೋಗಿ ಬನ್ನಿ. ಊರು ಸುತ್ತಿ ಬಿಸಿಲಿನಲ್ಲಿ ಸುಸ್ತಾಗುವ ಬದಲು ಇದು ಬೆಸ್ಟ್.

ಮನೆಯಿಂದ ಹೊರ ಹೋಗುವ ಮನಸ್ಸಿಲ್ಲವಾದ್ರೆ ಮನೆಯ ಗಾರ್ಡನ್ ನಲ್ಲಿ ಟೆಂಟ್ ನಿರ್ಮಿಸಿಕೊಂಡು ಒಟ್ಟಿಗೆ ಕಾಫಿ ಹೀರ್ತಾ ಸಮಯ ಕಳೆಯಬಹುದು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read