ಕಾಲೇಜುಗಳಲ್ಲಿ ರ್ಯಾಗಿಂಗ್ ತಡೆಗಟ್ಟಲು ಕಠಿಣ ಕಾನೂನುಗಳಿದ್ದರೂ ವಿದ್ಯಾರ್ಥಿಗಳು ರ್ಯಾಗಿಂಗ್ ನಿಂದ ಪ್ರಾಣ ಕಳೆದುಕೊಳ್ಳುದ್ದಾರೆ. ರ್ಯಾಗಿಂಗ್ನಿಂದಾಗಿ ಯುವ ಎಂಜಿನಿಯರಿಂಗ್ ವಿದ್ಯಾರ್ಥಿ ಜಾಧವ್ ಸಾಯಿ ತೇಜ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಮೆಡಿಪಲ್ಲಿಯಲ್ಲಿರುವ ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿನಲ್ಲಿ ರ್ಯಾಗಿಂಗ್ ಕಿರುಕುಳಕ್ಕೆ ಮನನೊಂದು ಜಾಧವ್ ಸಾಯಿ ತೇಜ ಎಂಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆದಿಲಾಬಾದ್ ಜಿಲ್ಲೆಯ ಸಾಯಿ ತೇಜ ಅವರನ್ನು ಸೀನಿಯರ್ಸ್ ಮತ್ತು ಸ್ಥಳೀಯ ಯುವಕರು ಥಳಿಸಿ, ಬಾರ್ಗೆ ಕರೆದೊಯ್ದು 15 ಸಾವಿರ ರೂ. ಬಿಲ್ ಪಾವತಿಸಲು ಕಿರುಕುಳ ನೀಡಿದ್ದಾರೆ. ಇದರಿಂದ ತೀವ್ರ ನೊಂದ ಸಾಯಿ ತೇಜ ತನ್ನ ತಂದೆಗೆ ವಿಡಿಯೋ ಕಳುಹಿಸಿ ಹಾಸ್ಟೆಲ್ನಲ್ಲಿ ನೇಣು ಬಿಗಿದುಕೊಂಡಿದ್ದಾನೆ. ನೇಣು ಹಾಕಿಕೊಳ್ಳುವ ಮೊದಲು, ತನ್ನ ಆತ್ಮಹತ್ಯೆಗೆ ರ್ಯಾಗಿಂಗ್ ಕಾರಣ ಎಂದು ಉಲ್ಲೇಖಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಮೆಡಿಪಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ಗಾಂಧಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿದರು.