ಕ್ರಿಕೆಟ್ ಆಡುತ್ತಿದ್ದಾಗಲೇ ಹಠಾತ್ ಹೃದಯಾಘಾತದಿಂದ ಸಾವು; ಆಘಾತಕಾರಿ ವಿಡಿಯೋ ವೈರಲ್

ಯುವಜನತೆಯಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ ಮತ್ತೊಂದು ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕ್ರಿಕೆಟಿಗರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ವಿಡಿಯೋ ಇಂಟರ್ನೆಟ್ ನಲ್ಲಿ ಕಾಣಿಸಿಕೊಂಡಿದೆ. ಉತ್ತರಪ್ರದೇಶದ ನೋಯ್ಡಾದಲ್ಲಿ ಈ ದುರಂತ ನಡೆದಿದೆ. 36 ವರ್ಷದ ಎಂಜಿನಿಯರ್ ವಿಕಾಸ್ ನೇಗಿ ಎಂಬುವವರು ಕ್ರಿಕೆಟ್ ಆಟವಾಡುತ್ತಿದ್ದಾಗಲೇ ಮೈದಾನದಲ್ಲಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.

ಮಾವೆರಿಕ್ಸ್ XI ಮತ್ತು ಬ್ಲೇಜಿಂಗ್ ಬುಲ್ಸ್ ನಡುವಿನ ಪಂದ್ಯದಲ್ಲಿ ದುರಂತ ಸಂಭವಿಸಿದೆ. ವಿಕಾಸ್ ನೇಗಿ ಕೆಳಗೆ ಬೀಳುತ್ತಿದ್ದಂತೆ ಎರಡೂ ಕಡೆಯ ಆಟಗಾರರು ಸಿಪಿಆರ್ ಮಾಡಲು ಪ್ರಯತ್ನಿಸಿದರು. ಆದರೆ ಅವರು ಸ್ಥಳದಲ್ಲೇ ಮೃತಪಟ್ಟರು.

ಇನಿಂಗ್ಸ್ ನ 14 ನೇ ಓವರ್‌ನಲ್ಲಿ ಬೌಂಡರಿ ಬಾರಿಸಿದ ತನ್ನ ಬ್ಯಾಟಿಂಗ್ ಪಾಲುದಾರ ಉಮೇಶ್ ಕುಮಾರ್ ಅವರತ್ತ ವಿಕಾಸ್ ನೇಗಿ ಪಿಚ್‌ನ ಮಧ್ಯಭಾಗಕ್ಕೆ ಬಂದಾಗ ಈ ಘಟನೆ ಸಂಭವಿಸಿದೆ.

https://twitter.com/Delhiite_/status/1744667498308567419?ref_src=twsrc%5Etfw%7Ctwcamp%5Etweetembed%7Ctwterm%5E1744667498308567419%7Ctwgr%5E30245edd5bdf54261699815568e5066e990f75f5%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fengineercollapsesonpitchanddiesofheartattackwhileplayingcricketinnoidashockingvideosurfaces-newsid-n572797018

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read