ಪ್ರತಿಭಟನೆ, ಮುಷ್ಕರದಲ್ಲಿ ಭಾಗವಹಿಸುವ ನೌಕರರಿಗೆ ಬಿಗ್ ಶಾಕ್: ವೇತನ ಕಡಿತ ಸೇರಿ ಶಿಸ್ತು ಕ್ರಮದ ಎಚ್ಚರಿಕೆ

ನವದೆಹಲಿ: ಮುಷ್ಕರ, ಪ್ರತಿಭಟನೆಗಳಲ್ಲಿ ಭಾಗವಹಿಸಬೇಡಿ ಎಂದು ಕೇಂದ್ರ ಸರ್ಕಾರದ ನೌಕರರಿಗೆ ಎಚ್ಚರಿಕೆ ನೀಡಲಾಗಿದೆ.

ಹಳೆಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ಜಂಟಿ ವೇದಿಕೆ ಅಡಿಯಲ್ಲಿ ದೇಶದಾತ್ಯಂತ ಜಿಲ್ಲಾಮಟ್ಟದಲ್ಲಿ ರ್ಯಾಲಿ ನಡೆಸಲು ರಾಷ್ಟ್ರೀಯ ಜಂಟಿ ಕ್ರಿಯಾ ಸಮಿತಿ ಚಿಂತನೆ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತನ್ನ ಎಲ್ಲಾ ನೌಕರರಿಗೆ ಯಾವುದೇ ಪ್ರತಿಭಟನೆ ಮುಷ್ಕರಗಳಲ್ಲಿ ಭಾಗವಹಿಸದಂತೆ ಸೂಚನೆ ನೀಡಿದೆ.

ಎಚ್ಚರಿಕೆ ನಂತರವೂ ಪ್ರತಿಭಟನೆ ಮುಷ್ಕರದಲ್ಲಿ ಪಾಲ್ಗೊಂಡಲ್ಲಿ ನೌಕರರ ವೇತನ ಕಡಿತ ಸೇರಿದಂತೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಈ ಸಂಬಂಧ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳಿಗೆ ಆದೇಶ ನೀಡಿದೆ. ನೌಕರರಿಗೆ ಮುಷ್ಕರ ನಡೆಸಲು ಅಧಿಕಾರ ಇದೆ ಎಂದು ಶಾಸನಬದ್ಧವಾಗಿ ಎಲ್ಲಿಯೂ ಹೇಳಿಲ್ಲ. ಸುಪ್ರೀಂ ಕೋರ್ಟ್ ಹಲವು ಆದೇಶಗಳಲ್ಲಿ ಮುಷ್ಕರ ನಡೆಸುವುದು ದುರ್ನಡತೆ ಎಂದು ಹೇಳಿದೆ ಎಂದು ನೌಕರರಿಗೆ ನೀಡಲಾದ ಎಚ್ಚರಿಕೆ ಆದೇಶದಲ್ಲಿ ತಿಳಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read