ಕಚೇರಿಯಲ್ಲಿ ಹೆಚ್ಚಾಗ್ತಿದೆ ʼರಜೆʼ ಉಡುಗೊರೆಯಾಗಿ ನೀಡೋ ಪಾಲಿಸಿ….! ಇಲ್ಲಿದೆ ಈ ಕುರಿತ ಮಾಹಿತಿ

ಈಗ ಜನರ ಆಲೋಚನೆ, ಕೆಲಸ ಮಾಡುವ ವಿಧಾನ ಕೂಡ ಬದಲಾಗಿದೆ. ಕಂಪನಿಗಳು ಕೂಡ ಉದ್ಯೋಗಿಗಳ ಅಗತ್ಯಕ್ಕೆ ತಕ್ಕಂತೆ ತಮ್ಮ ಪಾಲಿಸಿಯನ್ನು ಬದಲಿಸುತ್ತಿವೆ. ಎಲ್ಲ ಕಂಪನಿಗಳಲ್ಲಿ ಉದ್ಯೋಗಿಗಳಿಗೆ ವರ್ಷಕ್ಕೆ ಒಂದಿಷ್ಟು ರಜೆ ನೀಡಲಾಗುತ್ತದೆ.

ಕೆಲ ಉದ್ಯೋಗಿಗಳು ಕಂಪನಿ ನೀಡಿದ ಎಲ್ಲ ರಜೆಯನ್ನು ಪಡೆಯಲು ಸಾಧ್ಯವಾಗೋದಿಲ್ಲ. ಕೆಲ ರಜೆಗಳು ಹಾಗೆ ಉಳಿದಿರುತ್ತವೆ. ಮುಂದಿನ ವರ್ಷಕ್ಕೆ ರಜೆಯನ್ನು ವರ್ಗಾಯಿಸುವ ಅವಕಾಶವನ್ನು ಕೆಲ ಕಂಪನಿ ನೀಡುತ್ತವೆ. ಮತ್ತೆ ಕೆಲ ಕಂಪನಿಗಳು ಈ ರಜೆಯನ್ನು ಬೇರೆ ರೀತಿಯಲ್ಲಿ ಬಳಸಿಕೊಳ್ಳಲು ಅವಕಾಶ ನೀಡಿವೆ. ಗಿಫ್ಟ್‌ ಎ ಲಿವ್‌ ಪಾಲಿಸಿಯನ್ನು ಜಾರಿಗೆ ತಂದಿವೆ.

ಗಿಫ್ಟ್‌ ಎ ಲಿವ್‌ ಪಾಲಿಸಿ ಪ್ರಕಾರ, ಉದ್ಯೋಗಿಗಳು ತಮ್ಮ ರಜೆಯನ್ನು ಅಗತ್ಯವಿರುವ ಉದ್ಯೋಗಿಗಳಿಗೆ ತುರ್ತು ಪರಿಸ್ಥಿತಿಯಲ್ಲಿ ಗಿಫ್ಟ್‌ ನೀಡಬಹುದು. ಸಮೀಕ್ಷೆಯಲ್ಲಿ ಈ ವಿಷ್ಯ ಬಹಿರಂಗವಾಗಿದೆ. ಸಮೀಕ್ಷೆ ಪ್ರಕಾರ, ಕಚೇರಿಯಲ್ಲಿ ಸ್ನೇಹ ಹಾಗೂ ಸಂಸ್ಕಾರದ ಸಂಸ್ಕೃತಿಯನ್ನು ಉತ್ತೇಜಿಸುವುದು ಇದ್ರ ಹಿಂದಿರುವ ಇನ್ನೊಂದು ಉದ್ದೇಶವಾಗಿದೆ. ಕಡಿಮೆ ರಜೆ ಹೊಂದಿರುವ ಹೊಸ ಉದ್ಯೋಗಿಗಳಿಗೆ ಇದು ನೆರವಾಗಲಿದೆ. ಮಾರಿಕೊ, ಪರ್ಸಿಸ್ಟೆಂಟ್ ಸಿಸ್ಟಮ್ಸ್ ಮತ್ತು ಬಿಟಿ ಗ್ರೂಪ್ ಇಂಡಿಯಾದಂತಹ ಇನ್ನೂರಕ್ಕೂ ಹೆಚ್ಚು ಕಂಪನಿಗಳು ಈ ಪಾಲಿಸಿಯನ್ನು ಜಾರಿಗೆ ತಂದಿವೆ.

ಈ ಪಾಲಿಸಿಯಿಂದ ಕಂಪನಿಯವರಿಗೂ ಲಾಭವಿದೆ. ರಜೆಯನ್ನು ಉಡುಗೊರೆಯಾಗಿ ನೀಡುವುದರಿಂದ ಉದ್ಯೋಗಿಗಳಲ್ಲಿ, ವಿಶೇಷವಾಗಿ ಹೊಸ ನೇಮಕಗಳಲ್ಲಿ ಭದ್ರತೆಯ ಭಾವನೆ ಬೆಳೆಯುತ್ತದೆ. ರಜೆ ಉಡುಗೊರೆಯಾಗಿ ಸಿಗೋದ್ರಿಂದ ರಜೆ ಅಗತ್ಯವಿರೋರಿಗೆ ಇದ್ರಿಂದ ಸಹಾಯವಾಗುತ್ತದೆ. ಇದ್ರಿಂದ ಕೆಲಸದಲ್ಲಿ ಸಮಸ್ಯೆ ಆಗೋದಿಲ್ಲ ಎನ್ನುತ್ತಾರೆ ಕಂಪನಿ ಮಾಲೀಕರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read