Watch Video: ಕೆರಳಿದ ಆನೆ ಮಾಡಿದ ಅವಾಂತರಕ್ಕೆ ಬೆಚ್ಚಿಬಿದ್ದ ಜನ…! ಹಲವು ವಾಹನಗಳು ʼಜಖಂʼ

ಬಿಹಾರದ ಸರನ್‌ನಲ್ಲಿ ಶನಿವಾರ ನಡೆದ ದಸರಾ ಮಹೋತ್ಸವದ ವೇಳೆ ಆನೆಯೊಂದು ಮಾವುತನ ನಿಯಂತ್ರಣ ತಪ್ಪಿದ್ದು, ಈ ವೇಳೆ ಕೆರಳಿದ ಆನೆ ಸುಮಾರು ಎರಡು ಗಂಟೆಗಳ ಕಾಲ ಮಾರುಕಟ್ಟೆ ಪ್ರದೇಶದಲ್ಲಿ ಅವಾಂತರ ಸೃಷ್ಟಿಸಿದೆ. ಹಲವು ಕಾರುಗಳಿಗೆ ಜಖಂ ಮಾಡಿದ್ದು, ಘಟನೆಯಲ್ಲಿ ಓರ್ವ ವ್ಯಕ್ತಿಯೂ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಆನೆ ತನ್ನ ಬೆನ್ನಿನ ಮೇಲೆ ಮೂವರೊಂದಿಗೆ ಮಾರುಕಟ್ಟೆ ಪ್ರದೇಶದಲ್ಲಿ ನಡೆಯುವುದು ಕಾಣಿಸುತ್ತದೆ. ಈ ವೇಳೆ ಹಠಾತ್‌ ನಿಯಂತ್ರಣ ಕಳೆದುಕೊಂಡಿದ್ದು, ಹಲವಾರು ಕಾರುಗಳಿಗೆ ಜಖಂ ಮಾಡಿದೆ.

ವಿಷಯ ತಿಳಿದು ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಆಗಮಿಸಿದರೂ ಆನೆಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಮಾರುಕಟ್ಟೆ ಪ್ರದೇಶದಲ್ಲಿ ಆನೆ, ವಾಹನಗಳನ್ನು ಹಾನಿಗೊಳಿಸುತ್ತಿರುವಾಗ ಸಾರ್ವಜನಿಕರು ತಮ್ಮ ಮೊಬೈಲ್‌ ನಲ್ಲಿ ವೀಡಿಯೊಗಳನ್ನು ರೆಕಾರ್ಡ್ ಮಾಡಿದ್ದಾರೆ.

ಕುಪಿತಗೊಂಡ ಆನೆಯನ್ನು ಉದ್ಯಾನವನಕ್ಕೆ ಸಾಗಿಸಿದ ನಂತರ ಮಾವುತನ ಸಹಾಯದಿಂದ ನಿಯಂತ್ರಣಕ್ಕೆ ತಂದು ಮರಕ್ಕೆ ಕಟ್ಟಿ ಹಾಕಲಾಯಿತು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read