ನೀರು ಕುಡಿಯಲು ಬಂದ ಆನೆ ಮೇಲೆ ಮೊಸಳೆ ದಾಳಿ; ಎದೆ ನಡುಗಿಸುವ ವಿಡಿಯೋ ವೈರಲ್

ನೀರು ಕುಡಿಯಲು ಬಂದ ಆನೆಯ ಮೇಲೆ ಮೊಸಳೆ ದಾಳಿ ಮಾಡಿರೋ ಎದೆ ನಡುಗಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜಿಂಬಾಬ್ವೆಯ ವಿಕ್ಟೋರಿಯಾ ಫಾಲ್ಸ್ ಸಫಾರಿ ಕ್ಲಬ್ ನಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮೆರಾದಲ್ಲಿ ಮೊಸಳೆ ದಾಳಿ ವೇಳೆ ಆನೆ ಜೀವನ್ಮರಣ ಹೋರಾಟ ನಡೆಸುತ್ತಿರುವ ದೃಶ್ಯ ಸೆರೆಯಾಗಿದೆ.

ಹೊಂಡದಲ್ಲಿ ನೀರು ಕುಡಿಯಲು ಆನೆಯು ಬಂದಿದ್ದು ಹೊಂಡದಲ್ಲಿದ್ದ ಮೊಸಳೆ ಆನೆಯ ಸೊಂಡಿಲು ಹಿಡಿದು ಭಯಾನಕ ದಾಳಿ ಮಾಡಲು ಮುಂದಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಆನೆ ಪರದಾಡಿ ಕೊನೆಗೆ ಯಶಸ್ವಿಯಾಗುತ್ತದೆ. ಈ ಪ್ರಯತ್ನದ ವೇಳೆ ಆನೆಯ ಚೀರಾಟದಿಂದ ಇತರೆ ಆನೆಗಳು ಹೆದರಿಕೊಂಡು ಓಡಿಹೋಗುತ್ತವೆ.

ಹಗಲಿನ ವೇಳೆಯಷ್ಟೇ ಅಲ್ಲ, ರಾತ್ತಿ ವೇಳೆಯೂ ಸಹ ಮೊಸಳೆ ಆನೆ ಮೇಲೆ ದಾಳಿ ಮಾಡಿದೆ. ಇಂತಹ ಅನಿರೀಕ್ಷಿತ ದಾಳಿಗೆ ಬೆದರಿದ ಆನೆಗಳು ಭಯದಿಂದ ಓಡಿಹೋಗುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read