ಉದ್ಯಮಿಯೊಬ್ಬರು ತನ್ನದೇ ಸಹಒಡೆತನದ ಖಾಸಗಿ ಅಭಯಾರಣ್ಯದಲ್ಲಿ ಆನೆ ದಾಳಿಗೆ ಬಲಿಯಾಗಿರುವ ಘಟನೆ ನಡೆದಿದೆ.
ದಕ್ಷಿಣ ಆಫ್ರಿಕಾದ ಕೇಪ್ ಟೌನ್ ಬಳಿಯ ಗೊಂಡವಾನಾ ಅಭಯಾರಣ್ಯದಲ್ಲಿ ಈ ದುರಂತ ಸಂಭವಿಸಿದೆ. ಫ್ರಾಂಕೋಯಿಸ್ ಕ್ರಿಶ್ಚಿಯನ್ ಕಾನ್ರಾಡಿ (39) ಆನೆ ದಾಳಿಗೆ ಸಾವನ್ನಪ್ಪಿರುವ ಉದ್ಯಮಿ.
ಗೊಂಡಾವಾನ ಖಾಸಗಿ ಅಭಯಾರಣ್ಯದಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ರೆಸಾರ್ಟ್ ನಲ್ಲಿ ಕಾಲಕಳೆಯುತ್ತಿದ್ದ ವೇಳೆ ರೆಸಾರ್ಟ್ ರೂಮ್ ಬಳಿ ಆನೆಗಳ ಹಿಂಡು ಬಂದಿದೆ. ಆನೆಗಳನ್ನು ಓಡಿಸಲು ಕೆನ್ರಾಡಿ ಹೋಗಿದ್ದಾರೆ. ಈ ವೇಳೆ ಆನೆಯೊಂದು ದಾಳಿ ನಡೆಸಿ ದಂತದಿಂದ ತಿವಿದು, ಕಾಲಿನಿಂದ ತುಳಿದಿದೆ. ಸಿಬ್ಬಂದಿಗಳು ಕೆನ್ರಾಡಿಯವರನ್ನು ರಕ್ಷಿಸಲು ಯತ್ನಿಸಿದ್ದಾರೆ. ಆದರೆ ಆನೆ ಸಮೀಪವೂ ಬರಲು ಬಿಟ್ಟಿಲ್ಲ. ಗಂಭೀರವಾಗಿ ಗಾಯಗೊಂಡ ಕೆನ್ರಾಡಿ ಕೊನೆಯುಸಿರೆಳೆದಿದ್ದಾರೆ.
ಈ ಬಗ್ಗೆ ಗೊಂಡಾವಾನಾ ಪ್ರೈವೆಟ್ ರಿಸರ್ವ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ ಎಂದು ವರದಿಯಾಗಿದೆ. ಕೆನ್ರಾಡಿ ಗೊಂಡಾವಾನ ಖಾಸಗಿ ಅಭಯಾರಣ್ಯ ಸಿಇಒ ಹಾಗೂ ಸಹ ಮಾಲೀಕರಾಗಿದ್ದರು. ಬಹುಕೋಟಿ ಮೌಲ್ಯದ ಸ್ಪೋರ್ಟ್ ಮ್ಯಾನೇಜ್ಮೆಂಟ್ ಕಂಪನಿ ಮುಖ್ಯಸ್ಥರೂ ಆಗಿದ್ದರು.