ಗೃಹಜ್ಯೋತಿ ಯೋಜನೆಯಡಿ ಫ್ರೀ ವಿದ್ಯುತ್: 200 ಯೂನಿಟ್ ದಾಟಿದರೆ ಪೂರ್ಣ ಬಿಲ್…?

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವ ನಿಧಿ ಯೋಜನೆಗಳ ಫಲಾನುಭವಿಗಳ ಆಯ್ಕೆ ಯೋಜನೆ ಜಾರಿ ಮೊದಲಾದ ವಿಷಯಗಳ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದು, ಸಭೆಯ ನಂತರ ಸಿಎಂ ಸಿದ್ದರಾಮಯ್ಯ ಯೋಜನೆ ಜಾರಿ ಬಗ್ಗೆ ಘೋಷಣೆ ಮಾಡಲಿದ್ದಾರೆ.

ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. 200 ಯೂನಿಟ್ ಮೇಲ್ಪಟ್ಟು ಮಾಸಿಕ ವಿದ್ಯುತ್ ಬಳಕೆದಾರರು ಪೂರ್ಣ ಬಿಲ್ ಪಾವತಿಸಬೇಕಿದೆ ಎಂದು ಹೇಳಲಾಗಿದೆ.

ಕಳೆದ ವರ್ಷದ ವಿದ್ಯುತ್ ಬಳಕೆ ಆಧರಿಸಿ ಎಷ್ಟು ಉಚಿತ ವಿದ್ಯುತ್ ನೀಡಬೇಕೆಂದು ನಿರ್ಧರಿಸಲಾಗುವುದ. ಗ್ರಾಹಕರು ಮೊದಲಿಗೆ ಪೂರ್ಣ ಬಿಲ್ ಪಾವತಿಸಿ ನಂತರ ಡಿಬಿಟಿ ಮೂಲಕ ಹಣ ಪಡೆಯಬೇಕು. ಉಚಿತ ವಿದ್ಯುತ್ ಬೇಡವಾದವರು ಅದನ್ನು ತಿರಸ್ಕರಿಸಬಹುದು. ಈ ರೀತಿಯಾಗಿ ಹಲವು ಷರತ್ತುಗಳನ್ನು ವಿಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read