83 ವರ್ಷದ ಹಿಂದಿನ ಕರೆಂಟ್‌ ಬಿಲ್ ಸೋಶಿಯಲ್‌ ಮೀಡಿಯಾದಲ್ಲಿ ಫುಲ್‌ ವೈರಲ್

ಸಾಮಾನ್ಯವಾಗಿ ಮನೆಯ ಕರೆಂಟ್‌ ಬಿಲ್‌ ಎಷ್ಟು ಬರುತ್ತೆ ಗಮನಿಸಿದ್ದಿರಾ? 500, ಸಾವಿರ ರೂಪಾಯಿ ಬರುತ್ತೆ. ಆದರೆ ಈ ಬಿಲ್ ನೋಡಿ, ಜಸ್ 5 ರೂಪಾಯಿ ಅಷ್ಟೆ. ಅಷ್ಟು ಕಡಿಮೆ ಕರೆಂಟ್‌ ಬಿಲ್ ಯಾರದಪ್ಪಾ ಅಂತ ಕನ್ಫ್ಯೂಸ್ ಆದ್ರೋ ಹೇಗೆ. ಇದು 1940ರ ಕಾಲದ ಕರೆಂಟ್‌ಬಿಲ್ ಇದೇ ಕರೆಂಟ್ ಬಿಲ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಸಲಿಗೆ ಇದು ಸ್ವಾತಂತ್ರ್ಯ ಪೂರ್ವದ ವಿದ್ಯುತ್‌ಬಿಲ್, ಅಂದರೆ ಸುಮಾರು 83 ವರ್ಷದ ಹಿಂದಿನ ಬಿಲ್. ಈಗೆಲ್ಲ ಕರೆಂಟ್‌ಬಿಲ್‌ನ್ನ ಮಶಿನ್‌ನಲ್ಲಿ ಪ್ರಿಂಟ್ ಮಾಡಿ ಕೊಡಲಾಗುತ್ತೆ. ಮೊದಲೆಲ್ಲ ಕರಂಟ್‌ ಬಿಲ್‌ನ್ನ ಕೈಯಲ್ಲಿ ಬರೆದುಕೊಡಲಾಗುತ್ತಿತ್ತು. ಈ 5 ರೂಪಾಯಿಯ ಕರೆಂಟ್‌ಬಿಲ್‌ನ ಸ್ಲಿಪ್ ಕೂಡಾ ಕೈಯಲ್ಲಿ ಬರೆದಿರುವುದನ್ನ ಗಮನಿಸಬಹುದು.

ಅಕ್ಟೋಬರ್ 15,1940ರದ್ದಾಗಿದೆ. ಇದು ಬಾಂಬೆ ಎಲೆಕ್ನಿಕ್ ಸಪ್ಲೈ ಮತ್ತು ಟಾಮ್‌ ಕಂಪನಿ ಲಿಮಿಟೆಡ್‌ಗೆ ಸೇರಿದ್ದಾಗಿದೆ. ಈ ಕಂಪನಿ ಆಗಸ್ಟ್ 7,1947ರಂದು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಸ್ವಾಧೀನ ಪಡಿಸಿಕೊಂಡಿದೆ.

ಈ ಹಳೆಯ ಬಿಲ್‌ನಲ್ಲಿ ಕೇವಲ 3.10 ರೂಪಾಯಿ ವಿದ್ಯುತ್ ಬಳಕೆಯಾಗಿದ್ದು, ತೆರಿಗೆ ಸೇರಿಸಿದ ನಂತರ ಈ ಬಿಲ್ 5.2 ರೂಪಾಯಿಯಾಗಿದೆ. ನೆಟ್ಟಿಗರು ಈ ಬಿಲ್ ನೋಡಿ ದಂಗಾಗಿ ಹೋಗಿದ್ದಾರೆ. ಅಷ್ಟೆ ಅಲ್ಲ 1940ರ ದಶಕದ ಕರೆಂಟ್‌ ಬಿಲ್‌ಗೂ ಇಂದಿನ ಕರೆಂಟ್ ಬಿಲ್‌ಗೂ ಹೋಲಿಕೆ ಮಾಡಿ ಬೆಲೆ ಏರಿಕೆ ಯಾವ ಮಟ್ಟಕ್ಕೆ ಹೋಗಿದೆ ಅಂತ ಕಾಮೆಂಟ್ ಮಾಡ್ತಿದ್ದಾರೆ.

ಇತ್ತೀಚೆಗೆ ಸೊಶಿಯಲ್ ಮೀಡಿಯಾದಲ್ಲಿ ಹಳೆಯ ಕಾಲದ ಸೈಕಲ್ ಬಿಲ್, ಮೋಟಾರ್‌ ಬೈಕ್ ಬಿಲ್, ಇವೆಲ್ಲ ವೈರಲ್ ಆಗಿದೆ. ಅದೇ ಲೀಸ್ಟ್ ಗೆ ಈಗ 83 ವರ್ಷ ಹಳೆಯ ಕಾಲದ ಕರೆಂಟ್ ಬಿಲ್ ಕೂಡಾ ಸೇರಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read